ಮಹದೇವಪುರ: ಆಕೆಯದು ವೆಲ್ ಸೆಟಲ್ಡ್ ಫ್ಯಾಮಿಲಿ. ಆದ್ರೂ, ತನ್ನ ಕಾಲ್ ಮೇಲೆ ತಾನು ನಿಂತ್ಕೊಬೇಕು ಅಂತ ಇ- ಕಾಮರ್ಸ್ ವ್ಯವಹಾರದೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಮಾಡ್ತಿದ್ಲು. ಆದರೆ, ಅದೇ ಬ್ಯುಸಿನೆಸ್ ಮೀಟಿಂಗ್ ಅಂತಹ ಹೇಳಿ ಮನೆಯಿಂದ ಹೊರಟವಳು ಕೊಳೆತ ಸ್ಥಿತಿಯಲ್ಲಿದ್ದ ಶವವಾಗಿ ಪತ್ತೆಯಾಗಿದ್ದಾಳೆ.
ಹಾಗಾದ್ರೆ, ಮನೆಯಿಂದ ಹೊರ ಹೋದವಳನ್ನ ಕೊಂದವರ್ಯಾರು, ಯಾವ ಕಾರಣಕ್ಕೆ ಆಗಿರ್ಬೋದು ಅನ್ನೋ ಅನುಮಾನಗಳು ಕಾಡುತ್ತಿವೆ. ಶವವಾಗಿ ಪತ್ತೆಯಾದ ಮಲ್ಲೇಶ್ವಂರ ನಿವಾಸಿಯಾಗಿರೋ ಸುನೀತ, ಇಲ್ಲಿನ 13 ನೇ ಕ್ರಾನ್ ನಲ್ಲಿರೋ ಅಭಿರಾಮ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದು, ಫ್ಯಾಮಿಲಿ ಮೆಂಬರ್ಸ್ ಅಮೇರಿಕದಲ್ಲಿ ನೆಲೆಸಿದ್ದಾರೆ.
ಸದಾ ಅಲ್ಲಿ ಇಲ್ಲಿ ಮನೆಗಳನ್ನ ನೋಡದ್ರಲ್ಲಿ ಸೇಲ್ ಮಾಡಿಸೋದ್ರಲ್ಲಿ ಬ್ಯುಸಿಯಾಗಿದ್ದ ಸುನೀತಾಗೆ ಮೊನ್ನೆ ಅಂದ್ರೆ ವಾರದ ಹಿಂದೆ ಬಂದ ಮೊಬೈಲ್ ಕಾಲ್ ರಿಸೀವ್ ಮಾಡಿ, ಬ್ಯುಸಿನೆಸ್ ಮೀಟಿಂಗ್ ಇದೆ ಅಂತ ತನ್ನ ಕಾರನ್ನ ತೆಗೆದುಕೊಂಡ್ ಅಭಿರಾಮ್ ಅಪಾರ್ಟ್ಮೆಂಟ್ ನಿಂದ ಹೊರ ಹೋಗಿದ್ದಾಳೆ. ಇತ್ತ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಮಲ್ಲೇಶ್ವರಂ ಪೊಲೀಸ್ರು ಸುನೀತ ಪತ್ತೆಗೆ ತನಿಖೆ ಕೈಗೊಂಡಿದ್ರು. ಆದ್ರೆ, ಹುಡುಕಾಟ ನಡೆಸ್ತಿದ್ದ ನಾಲ್ಕು ದಿನಗಳ ಬಳಿಕ ವರ್ತೂರು ಸಮೀಪದ ಮುಳ್ಳೂರಿನ ಅಪಾರ್ಟ್ಮೆಂಟ್ ವೊಂದರ ನಾಲ್ಕನೇ ಮಹಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಸದ್ಯ ಸಿಕ್ಕ ಕೆಲವು ಖಚಿತ ಆಧಾರದ ಮೇಲೆ ಹತ್ಯೆ ಕೇಸ್ ನಲ್ಲಿ ಭಾಗಿಯಾಗಿದ್ದ ಇಮ್ರಾನ್ ಹಾಗೂ ವೆಂಕಟೇಶ್ ಎಂಬುವರನ್ನ ಬಂಧಿಸಿರುವ ವರ್ತೂರು ಪೊಲೀಸ್ರು ತಲೆಮರೆಸಿಕೊಂಡಿರೋ ಪ್ರಮುಖ ಆರೋಪಿ ಕಿರಣ್ ಕುಮಾರ್ ಎಂಬಾತನ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.
PublicNext
14/04/2022 10:11 am