ಯಲಹಂಕ: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಪರಿಚಯಿಸಿಕೊಂಡು, ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿತ್ತು. ದೌರ್ಜನ್ಯ ಕೃತ್ಯವನ್ನು ಮತ್ತೊಬ್ಬ ಆಸಾಮಿ ಚಿತ್ರೀಕರಣ ಮಾಡಿಕೊಳ್ತಿದ್ದ. ನಂತರ ಚಿತ್ರೀಕರಣದ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ. ಈ ಸಂಬಂಧ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಯಲಹಂಕ ಪೊಲೀಸರು ದುರುಳರನ್ನು ಬಂಧಿಸಿದ್ದಾರೆ. ಈ ಆರು ಜನ ಬಂಧಿತರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಇದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.
Kshetra Samachara
09/04/2022 05:00 pm