ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹುಸಿ‌ ಬಾಂಬೆ‌ ಕರೆ- ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ಎಬೆನೇಜರ್ ಶಾಲೆಗೆ ಬಾಂಬ್ ಕರೆ ಬಂದಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಪೋಷಕರಿಗೆ ಬಾಂಬ್ ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ತೆರಳಿ ಮಕ್ಕಳನ್ನ ಮನೆಗೆ ಕರೆದೊಯ್ಯುತ್ತಿದ್ದಾರೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಕ್ಕಳನ್ನು ಕ್ಲಾಸ್ ರೂಮ್ ಹೊರಗೆ ಕಳುಹಿಸಿ, ಶಾಲೆ ಕೊಠಡಿ ಶೌಚಾಲಯ ಸೇರಿದಂತೆ ಇಡೀ ಶಾಲಾ ಕ್ಯಾಂಪಸ್‌ನಲ್ಲಿ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ ನಡೆಸಲಾಯಿತು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪೋಷಕರು, ಮಾಧ್ಯಮಗಳಲ್ಲಿ ವಿಚಾರ ಕೇಳಿ ಶಾಕ್ ಆಯ್ತು. ಮಕ್ಕಳನ್ನ ಮನೆಗೆ ಕರೆದುಕೊಂಡು ಹೋಗಲು ಬಂದೆ. ಬಾಂಬ್ ಸುದ್ದಿ ಕೇಳಿ ಒಂದು ಕ್ಷಣ ಆತಂಕವಾಯಿತು. ಕೂಡಲೇ ಶಾಲೆ ಆಡಳಿತ ಮಂಡಳಿಗೆ ಕರೆ ಮಾಡಿ ಕೇಳಿದಾಗ ಹೌದು ಅಂದ್ರು. ಎಲ್ಲ ಮಕ್ಕಳು, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದ್ದರು. ಬಳಿಕ ಶಾಲೆಗೆ ಬಂದು ಮಗಳನ್ನ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಬ್ಬಗೋಡಿ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ಅವರು, ಇಡೀ ಶಾಲೆಯನ್ನು ತಪಾಸಣೆ ನಡೆಸಲಾಗಿದೆ. ಶಾಲೆಯ 120 ಕ್ಕೂ ಅಧಿಕ ಕೊಠಡಿಗಳ ಪರಿಶೀಲನೆ ನಡೆಸಲಾಗಿದೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆ ಆಗಿಲ್ಲ. ಮೇಲ್ನೋಟಕ್ಕೆ ಹುಸಿ ಬಾಂಬ್ ಮೇಲ್ ಸಾಧ್ಯತೆ ಇದೆ. ಶಾಲೆಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಬಗ್ಗೆ ತನಿಖೆ‌ ನಡೆಸಿಲಾಗುತ್ತಿದೆ ಎಂದು ತಿಳಿಸಿದ್ದರು.

ಪ್ರಾಥಮಿಕ ತನಿಖೆ ಪ್ರಕಾರ, Padonyk.sente@gmail.com ನಿಂದ ಹುಸಿ ಬಾಂಬ್ ಮೆಸೇಜ್ ಬಂದಿದೆ. ಕ್ಯಾಲಿಫೋರ್ನಿಯಾ ಎಂಬ ಲೊಕೇಶನ್ ನಿಂದ ಇ-ಮೇಲ್ ಮಾಡಲಾಗಿದೆ ಎನ್ನುವಂತ ಮಾಹಿತಿ ಲಭಿಸಿದೆ.

Edited By : Manjunath H D
PublicNext

PublicNext

08/04/2022 04:28 pm

Cinque Terre

28.81 K

Cinque Terre

0

ಸಂಬಂಧಿತ ಸುದ್ದಿ