ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಪ್ಲಾಸ್ಟಿಕ್ ನಿಷೇಧಕ್ಕೆ ಕ್ಯಾರೇ ಎನ್ನದ ವ್ಯಾಪಾರಸ್ಥರು: ಬಿಬಿಎಂಪಿ ದಾಳಿಯ ವೇಳೆ 7 ಕೆಜಿ‌ ಪ್ಲಾಸ್ಟಿಕ್ ಜಪ್ತಿ..

ಕೆಂಗೇರಿ: ಕೆಂಗೇರಿ ಸುತ್ತ-ಮುತ್ತಾ ಹಲವಾರು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಸಿಕ್ತಾನೆ ಇದೆ. ಹೀಗಾಗಿ ಮಾಹಿತಿ ಮೇರೆಗೆ ಬಿಬಿಎಂಪಿಯವ್ರು ದಾಳಿ‌ಮಾಡಿ, ಮಮತಾ ಪ್ರಾವಿಷನ್ ಸ್ಟೋರ್ ನಲ್ಲಿ 7 ಕೆಜಿ‌ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ.. ಆದ್ರೆ ಈ ಸುತ್ತ-ಮುತ್ತಾ ಅಂಗಡಿಗಳಲ್ಲಿ, ಕೆಜಿ ಗಟ್ಟಲೆ ಪ್ಲಾಸ್ಟಿಕ್ ಇದ್ರು ಕೂಡ ಬಿಬಿಎಂಪಿ ಯವ್ರು ತಲೆ ಕೆಡೆಸಿಕೊಳ್ತಿಲ್ಲ.. 1 ಕೆಜಿಗೆ 3,500 ರೂ ದಂಡ ಕಟ್ಟಿಸಿಕೊಳ್ತಾರೆ, ಆದ್ರೆ 7 kg ತೂಕದ ಪ್ಲಾಸ್ಟಿಕ್ ಜಪ್ತಿ ಮಾಡಿದ್ರು, 1 kg ಗೆ ಮಾತ್ರ ದಂಡ ಕಟ್ಟಿಸಿಕೊಂಡಿದ್ದಾರೆ..

ಈ ದಂಡವೂ ಸಹ ಕಚೇರಿಗೆ ಮುಟ್ಟುತ್ತೊ ಇಲ್ವೋ ಗೊತ್ತಿಲ್ಲ, ಅದೆನೇ ಇರ್ಲಿ ಈ ಬಿಬಿಎಂಪಿ ಅವರು ಈ ಅಂಗಡಿಗಳಿಗೆ ದಂಡ ಹಾಕುವ ಬದಲು ಈ‌ ಪ್ಲಾಸ್ಟಿಕ್ ಮ್ಯಾನುಫ್ಯಾಕ್ಚರಿಂಗ್ ಮಾಡುವ ಜಾಗವನ್ನ ಜಪ್ತಿ‌ ಮಾಡೋದು ಒಳ್ಳೆಯದು , ಆಗ ಅಂಗಡಿಯವ್ರು ಪ್ಲಾಸ್ಟಿಕ್ ಕೊಂಡುಕೊಳ್ಳಲು ಆಗೋದಿಲ್ಲ. ಒಟ್ಟಾರೆ, ಮಗುವನ್ನ ಚಿವುಟಿ ತೊಟ್ಟಿಲನ್ನ ತೂಗುವ ಕೆಲಸ ಮಾಡ್ತಿದ್ದಾರೆ, ಈ ಬಿಬಿಎಂಪಿಯವ್ರು..

Edited By : Shivu K
Kshetra Samachara

Kshetra Samachara

08/04/2022 08:55 am

Cinque Terre

3.48 K

Cinque Terre

0

ಸಂಬಂಧಿತ ಸುದ್ದಿ