ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರೇಯಸಿಗಾಗಿ ಚಿನ್ನದ ಒಡವೆ ಕಳ್ಳತನ: ಕೆ.ಪಿ.ಅಗ್ರಹಾರ ಪೊಲೀಸರಿಂದ ಬಂಧನ

ವಿಜಯನಗರ: ಪ್ರೀತಿಸಿದ ಹುಡುಗಿಯನ್ನ ಖುಷಿಪಡಿಸಲು ಆಕೆಗಾಗಿ ಖರ್ಚು ಮಾಡಲು ಹಾಗೂ ಶೋಕಿ ಜೀವನ ನಡೆಸಲು ಪರಿಚಯಸ್ಥರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ‌ ಮಾಡಿದ್ದ ಆರೋಪಿಯನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ‌.

ಕೆ.ಪಿ ಅಗ್ರಹಾರ ನಿವಾಸಿ ನವೀನ್ ಕುಮಾರ್ ಬಂಧಿತ ಆರೋಪಿ. ಜಯನಗರದ ಕೆಫೆ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಕಳ್ಳತನವಾಗಿದ್ದ ಮನೆ ಮಾಲೀಕ ಶಿವಶಂಕರಯ್ಯ ಪತ್ನಿ ಹಾಗೂ ಆರೋಪಿ ನವೀನ್‌ ಕುಮಾರ್ ತಾಯಿ ಪರಸ್ಪರ ಪರಿಚಯಸ್ಥರಾಗಿದ್ದರು.‌

ಇಬ್ಬರ ಮನೆ ಒಂದೇ ಏರಿಯಾದಲ್ಲಿತ್ತು. ಹಾಗಾಗಿ ಆಗಾಗ ಶಿವಶಂಕರಯ್ಯ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಮಾರ್ಚ್ 11 ರಂದು ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯಲ್ಲಿ 109 ಗ್ರಾಂ ಚಿನ್ನಾಭರಣ ಕದ್ದಿದ್ದಾನೆ. ಈತ ಕದ್ದಿರುವುದು ಮನೆಯವರಿಗೂ ಗೊತ್ತಾಗಿರಲಿಲ್ಲ. ಇತ್ತೀಚೆಗೆ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಒಡವೆ ಹಾಕಿಕೊಳ್ಳಲು ನೋಡಿದಾಗ ಕಾಣೆಯಾಗಿರುವುದು ಗೊತ್ತಾಗಿದೆ. ಆಗಾಗ ಮನೆಗೆ ಬರುತ್ತಿದ್ದ ನವೀನ್ ಮೇಲೆ‌ ಶಂಕೆ ವ್ಯಕ್ತಪಡಿಸಿ ಈತನ ವಿರುದ್ಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ‌ ಇನ್ಸ್ ಪೆಕ್ಟರ್ ಸದಾನಂದ ಸಿಸಿಟಿವಿ ದೃಶ್ಯಾವಳಿ ಆಧರಿಸಿ‌ ಆರೋಪಿಯನ್ನು ಬಂಧಿಸಿದ್ದಾರೆ. ಪ್ರೀತಿಸಿದ ಹುಡುಗಿಗಾಗಿ ಹಾಗೂ ಮೋಜು ಜೀವನ ನಡೆಸಲು ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

07/04/2022 10:42 pm

Cinque Terre

43.64 K

Cinque Terre

0

ಸಂಬಂಧಿತ ಸುದ್ದಿ