ಬೆಂಗಳೂರು: ಆನ್ ಲೈನ್ ನಲ್ಲಿ 500 ರೂಪಾಯಿಗೆ ವೈನ್ ಆರ್ಡರ್ ಮಾಡಿದ ಯುವತಿ 50 ಸಾವಿರ ಕಳೆದುಕೊಂಡಿದ್ದಾಳೆ. ಈ ಸಂಬಂಧ ಸೆಂಟ್ರಲ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಲ್ ಬಾಗ್ ರಸ್ತೆ ನಿವಾಸಿಯಾಗಿರುವ ಯುವತಿಯು ಕಳೆದ ಎರಡು ದಿನಗಳ ಹಿಂದೆ ವೈನ್ ಹೋಮ್ ಡಿಲಿವರಿ ಶಾಪ್ ನಲ್ಲಿ ವೈನ್ ಆರ್ಡರ್ ಮಾಡಿ, 540 ರೂಪಾಯಿ ಪಾವತಿಸಿದ್ದಳು. ಇದರಂತೆ ಸಿಬ್ಬಂದಿ ಹೋಮ್ ಡಿಲಿವರಿ ಮಾಡಿದ್ದಾನೆ. ಈ ವೇಳೆ ಡಿಲಿವರಿ ಚಾರ್ಜ್ 10 ರೂಪಾಯಿ ನೀಡುವಂತೆ ಹೇಳಿದ್ದಾನೆ. ಆನ್ ಲೈನ್ ಮೂಲಕ ಪಾವತಿಸಲು ಮುಂದಾದ ಯುವತಿಗೆ ಓಟಿಪಿ ಪಡೆದು ಆಕೆ ಬ್ಯಾಂಕ್ ಅಕೌಂಟ್ ನಲ್ಲಿದ್ದ 49 ಸಾವಿರಕ್ಕಿಂತ ಹೆಚ್ಚು ವರ್ಗಾವಣೆ ಮಾಡಿಸಿಕೊಂಡು ಜಾಗ ಖಾಲಿ ಮಾಡಿದ್ದಾನೆ.
ಮೋಸಗೊಳಗಾದ ಯುವತಿಯು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
Kshetra Samachara
30/03/2022 05:04 pm