ಬೆಂಗಳೂರು: ವಿದ್ಯುತ್ ಸಂಪರ್ಕ ಬದಲಾವಣೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಬೆಂಗಳೂರು ಉತ್ತರ ವೃತ್ತದ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದು, ಬಸವೇಶ್ವರನಗರ ನಿವಾಸಿಯೊಬ್ಬರು ಹೈ ಟೆನ್ಷನ್ ವಿದ್ಯುತ್ ಸಂಪರ್ಕದಿಂದ ಲೋ ಟೆನ್ಷನ್ ಸಂಪರ್ಕ ಒದಗಿಸಲು ಮನವಿ ಸಲ್ಲಿಸಿದ್ದರು.
ಈ ವೇಳೆ ಲೈನ್ ಎಕ್ಸ್ ಚೇಂಜ್ ಗೆ 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಈ ವೇಳೆ ದೂರುದಾರರು ಲಂಚದ ಕುರಿತು ಎಸಿಬಿಗೆ ದೂರು ನೀಡಿದ್ರು. ಇನ್ನು ಟ್ರಾಪ್ ಕಾರ್ಯಾಚರಣೆ ನಡೆಸಿದ ಎಸಿಬಿ ರೆಡ್ ಹ್ಯಾಂಡ್ ಆಗಿ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ನ ಖೆಡ್ಡಾಗೆ ಕೆಡವಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿರುವ ಎಸಿಬಿ ಹೆಚ್ಚಿನ ವಿಚಾರಣೆ ಕೈಗೊಂಡಿದೆ.
Kshetra Samachara
29/03/2022 10:57 am