ಬೆಂಗಳೂರು: ಒಂದು ಕೈಯಲ್ಲಿಬಿಯರ್ ಬಾಟಲ್ ಇನ್ನೊಂದು ಕೈಯಲ್ಲಿ ಕಲ್ಲು. ಲಾಕ್ ಒಡೆಯಲು ಬಿಯರ್ ಕುಡಿಯುತ್ತಲೇ ಕಲ್ಲು ಹುಡುಕಿದ ಕಳ್ಳರು ಬೀರು ಲಾಕರ್ ಮುರಿದು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಪಾಳ್ಯದಲ್ಲಿ ಘಟನೆ ನಡೆದಿದ್ದು, ಮನೆ ಮಾಲೀಕ ಕುಮಾರ್ ನೈಟ್ ಶಿಫ್ಟ್ ಕೆಲಸಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಮಧ್ಯರಾತ್ರಿ ಮನೆಯ ಡೋರ್ ಲಾಕ್ ಆಗಿದ್ದನ್ನು ಕಂಡ ಆಸಾಮಿಗಳು ಬೀರು ಲಾಕ್ ಮುರಿಯಲಾಗದೆ ರಸ್ತೆಯಲ್ಲಿದ್ದ ಕಲ್ಲನ್ನ ತೆಗೆದುಕೊಂಡು ಹೋಗಿ ಲಾಕ್ ಮುರಿದಿದ್ದಾರೆ. ಕಳ್ಳರು ಮನೆ ಬಳಿ ಕಲ್ಲು ಎತ್ತಿಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇನ್ನೂ ಕುಮಾರ್ ಪರಿಚಯಸ್ಥರೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
27/03/2022 04:19 pm