ಬೆಂಗಳೂರು: ಪಾದಚಾರಿ ಮಹಿಳೆ ಮೇಲೆ ಟೆಂಪೋ ಹತ್ತಿಸಿದ್ದ ಆರೋಪಿಗೆ ಘಟನೆ ನಡೆದ ನಾಲ್ಕು ವರ್ಷದ ಬಳಿಕ ಶಿಕ್ಷೆ ಪ್ರಕಟವಗಿದೆ. 2018ರಲ್ಲಿ ಆ್ಯಕ್ಸಿಡೆಂಟ್ ಮಾಡಿದ್ದ ಅಪರಾಧಿಗೆ ಎರಡು ವರ್ಷ ಜೈಲು ಶಿಕ್ಷೆ 5,500 ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಟೆಂಪೋ ಚಾಲಕ ಮಂಜು ಜೈಲು ಶಿಕ್ಷೆಗೊಳಗದಾ ಅಪರಾಧಿಯಾಗಿದ್ದು, ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ್ಯಕ್ಸಿಡೆಂಟ್ ಮಾಡಿದ್ದ ಅಪರಾಧಿ ಮಂಜು.
ಅಜಾಗರಕತೆಯಿಂದ ವಾಹನ ಚಲಾಯಿಸಿ ರಸ್ತೆ ದಾಟುತ್ತಿದ್ದ ಮಾರಮ್ಮ ಎಂಬ ಮಹಿಳೆಗೆ ಟೆಂಪೋದಿಂದ ಡಿಕ್ಕಿ ಹೊಡೆದಿದ್ದಚಾಲಕ ಮಂಜು, ಈ ವೇಳೆ ಮಾರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸದ್ಯ ನಾಲ್ಕನೇ ಸಂಚಾರಿ ನ್ಯಾಯಾಲಯದಿಂದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
Kshetra Samachara
24/03/2022 08:28 pm