ಆನೇಕಲ್: ಆತ ಓದು ಮುಗಿಸಿ ಮನೇಲಿದ್ದ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಇತ್ತೀಚಿಗೆ ಐಪಿಎಲ್ ಬೆಟ್ಟಿಂಗ್‌ನಲ್ಲಿ 50 ಲಕ್ಷ ರೂ. ಹಣ ಕಳೆದುಕೊಂಡಿದ್ದ. ಆಗಲೇ ಮಾಡಿದ್ದು ಈ ಮಾಸ್ಟರ್ ಪ್ಲಾನ್ ಸೋಶಿಯಲ್ ಮೀಡಿಯಾದಲ್ಲಿ ಅಂದದ ಚಂದದ ಹುಡುಗಿಯರ ಫೋಟೋವನ್ನು ಬಳಸಿಕೊಂಡು ವಾಟ್ಸಾಪ್ ನಂಬರಿಗೆ ಕಳುಹಿಸಿ ಅವರಿಂದ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದ. ಇಂಟರ್ಸ್ಟಿಂಗ್ ಏನಂತ ಅಂದ್ರೆ ವಂಚನೆಗೊಳಗಾದವರೇ ಆತನನ್ನ ಹೆಡೆಮುರಿ ಕಟ್ಟಿದ್ದಾರೆ.
ಹೌದು. ಇತ್ತೀಚಿಗೆ ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆಗಳ ಮಾಂಸ ದಂಧೆಗೆ ಯುವಕರು ಬಲಿಪಶುಗಳಾಗುತ್ತಿದ್ದಾರೆ. ಇನ್ನು ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ವೇಶ್ಯಾವಾಟಿಕೆಯ ಮಾಂಸ ದಂಧೆ ಬೆಳಕಿಗೆ ಬಂದಿದೆ.
ಆನೇಕಲ್ ಮೂಲದ ಯುವಕರೊಬ್ಬರಿಗೆ ಫೇಸ್‌ಬುಕ್ ಮುಖಾಂತರ ಅಂದದ ಹುಡುಗಿಯ ಫೋಟೋ ಆ್ಯಪ್ ಮೂಲಕ ರಿಕ್ವೆಸ್ಟ್ ಬಂದಿದೆ. ಅದನ್ನು ಕ್ಲಿಕ್ ಮಾಡಿ ವೀಕ್ಷಣೆ ಮಾಡಿದನಂತೆ ಕಾಲ್‌ಗರ್ಲ್ ನಂಬರ್ ಬಂದಿದೆ. ಯುವಕ ನಂಬರ್ ಮಾತುಕತೆ ಮಾಡಿ ಫೋನ್ ಪೇ ಮೂಲಕ 10 ಸಾವಿರ ರೂ. ಕಳಿಸಿದಂತೆ ಬಳಿಕ ಹೇಳಿದ ಜಾಗಕ್ಕೆ ಹೋಗಿ ನೋಡಿದಾಗ ಹುಡುಗಿನು ಇಲ್ಲ ಹಣವೂ ಇಲ್ಲ. ಇದೊಂದು ವಂಚನೆಯ ಜಾಲ ಅಂತ ಪತ್ತೆಯಾಗಿದೆ.
ಹಣ ಕಳೆದುಕೊಂಡ ವ್ಯಕ್ತಿ ಗೂಗಲ್ ಪೇ, ಫೋನ್ ಪೇ ಕೆಲಸ ಮಾಡುವ ಯುವಕರ ಸಹಾಯ ಪಡೆದು ಮಾಹಿತಿಯನ್ನು ಕಲೆಹಾಕಿ ಆತನನ್ನು ಆನೇಕಲ್‌ನ ಸುರಜಕ್ಕನಹಳ್ಳಿ ಬಳಿ ಸೆರೆಹಿಡಿದಿದ್ದಾರೆ.
ಈ ದಂಧೆಗೆ ತಾಯಿಯ ವೋಟರ್ ಐಡಿ ಬಳಸಿಕೊಂಡು ಸಿಮ್ ಖರೀದಿ ಮಾಡಿ ವ್ಯವಹಾರ ಮಾಡಿದ್ದಂತೆ. ಅಷ್ಟೋತ್ತಿಗೆ ಜಾಲದ ಮಾಹಿತಿ ಪಡೆದ ಯುವಕರು ಮನೆ ಹತ್ತಿರ ಹೋಗಿ ತಾಯಿ ಬಳಿ ಮಗನ ಬಗ್ಗೆ ವಿಚಾರಿಸಿದ್ದಾರೆ. ನಂತರ ಕಿಂಗ್ಪಿನ್ ವಂಚನೆಗೊಳಗಾದ ಯುವಕರನ್ನು ಭೇಟಿ ಮಾಡಿ ಮೂರು ಲಕ್ಷ ಕೊಡುವುದಾಗಿ ಒಪ್ಪಿಕೊಂಡಿದ್ದನಂತೆ ಜೊತೆಗೆ ವಿಷಯ ಪೊಲೀಸರು ತಿಳಿದಂತೆ ನೋಡಿಕೊಳ್ಳುವಂತೆ ಹೇಳಿದನಂತೆ..
ಒಟ್ಟಿನಲ್ಲಿ ಕಷ್ಟಪಟ್ಟು ದುಡಿದು ಜೀವನ ಸಾಗಿಸಬೇಕಿದ್ದ ಯುವಕ ಹಣ ಮಾಡಲು ಅಡ್ಡದಾರಿ ಹಿಡಿದು ಮೋಸದ ಕೂಪಕ್ಕೆ ಬಿದ್ದಿದ್ದಾರೆ. ಇನ್ನು ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ಪೊಲೀಸ್ ತನಿಖೆಯ ನಂತರ ಸತ್ಯಾಸತ್ಯತೆಗಳು ತಿಳಿದು ಬರಲಿದೆ.
Kshetra Samachara
24/03/2022 06:10 pm