ಬೆಂಗಳೂರು: ಪ್ರೀತಿಸಿ ಮದುವೆಯಾಗಿ ಇನ್ನೂ ವರುಷ ತುಂಬಿಲ್ಲ ಅದಾಗ್ಲೆ. ಪತಿ ಕಿರುಕುಳಕ್ಕೆ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಗರದ ಗಾಯತ್ರಿನಗರದಲ್ಲಿ ನಡೆದಿದೆ. ಎಂ ಕಾಂ ಪದವಿಧರೆಯಗಿರೋ 28 ವರ್ಷದ ವಿಂದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಕಳೆದ9 ತಿಂಗಳ ಹಿಂದಷ್ಟೇ ರಾಕೇಶ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ಳು. ಮದುವೆ ಬಳಿಕವೂ ರಾಕೇಶ್ ಕೆಲ ಯುವತಿಯರ ಸಂಬಂಧದ ಆರೋಪ ಕೇಳಿ ಬಂದಿದೆ.
ಇನ್ನೂ ತನ್ನ ಸಾವಿನ ಕುರಿತು ಡೆತ್ ನೋಟ್ ಬರೆದಿರುವ ವಿಂದ್ಯಾಶ್ರೀ ಯು ಆರ್ ಎ ಸ್ಯಾಡಿಸ್ಟ್ ಅಂಡ್ ಸೈಕೋ, ಯು ಆರ್ ದ ವರ್ಸ್ಟ್ ಪರ್ಸನ್ ಎಂದು ಪತಿ ಕುರಿತು ಆರೋಪಿಸಿದ್ದಾರೆ. ಡೆತ್ ನೋಟ್ ನಲ್ಲಿ ವಿಂದ್ಯಾಶ್ರೀ ಪತಿ ರಾಕೇಶ್ ಹೇಗೆ ಮೋಸ ಮಾಡಿದ್ದಾನೆ, ಯಾಕೋ ನನ್ನ ಮದುವೆಯಾದೆ. ನನ್ನ ಜೀವನ ಹಾಳು ಮಾಡಿದೆ. ನೀನು ಹೇಗೆ ಅನ್ನೋದು ಮದುವೆ ಆದ್ಮೇಲೆ ಗೊತ್ತಾಯ್ತು. ನೀನು ಎಷ್ಟು ಹುಡುಗಿಯರ ಜೊತೆ ಆಟ ಆಡಿದ್ದಿಯಾ ವಿಷಯ ಗೊತ್ತಾಗಿದೆ.ಹುಡುಗಿಯರೇನು ಸೆಕ್ಸ್ ಮೆಟಿರಿಯಲ್ ಗಳಲ್ಲ. ಅವರಿಗೂ ಭಾವನೆಗಳು ಇರುತ್ತವೆ. ಆದ್ರೆ ಯಾಕೆ ನನ್ನನ್ನು ಮದುವೆಯಾದ ರಾಕಿ. ನನ್ನನ್ನು ಪ್ರೀತಿಸು ಎಂದು ನಾನು ಕೇಳಲ್ಲ. ನೀನು ನನಗೆ ಫ್ರೆಂಡ್ ಆಗಿರಬೇಕಿತ್ತು. ಎಂದು ವಿಂದ್ಯಾ ತನ್ನ ಕೊನೆ ಅಕ್ಷರದಲ್ಲಿ ಆರೋಪಿಸಿ ನೇಣಿಗೆ ಶರಣಾಗಿದ್ದಾಳೆ.
ಸದ್ಯ ಪತಿ ರಾಕೇಶ್ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಅಡಿ ಕೇಸ್ ದಾಖಲು ಮಾಡಿರೋ ಸುಬ್ರಮಣ್ಯನಗರ ಪೊಲೀಸ್ರು ರಾಕೇಶ್ ನನ್ನ ವಶಕ್ಕೆ ಪಡೆದೆ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
19/03/2022 01:28 pm