ಬೆಂಗಳೂರು: ಪ್ರೀತಿ- ಪ್ರೇಮಕ್ಕೆ ಯಾವ ಜಾತಿ-ಧರ್ಮವೂ ಅಡ್ಡ ಬರೋದಿಲ್ಲ. ಆದ್ರೆ, ಮನೆಯವರಿಗೆ ಮಾತ್ರ ಜಾತಿ- ಧರ್ಮ ದೊಡ್ಡ ಕಂದಕವಾಗುತ್ತೆ. ಮುಸ್ಲಿಂ ಯುವತಿ ಹಿಂದೂ ಯುವಕನನ್ನ ಪ್ರೀತಿಸಿ ಮದ್ವೆಯಾದ್ಲು ಅನ್ನೋ ಒಂದೇ ಕಾರಣಕ್ಕೆ ಸ್ವಂತ ಅಣ್ಣನೇ ತಂಗಿಯ ಗಂಡನನ್ನ ಹತ್ಯೆಗೈಯಲು ಸುಪಾರಿ ಕೊಟ್ಟು ಪೊಲೀಸರಿಗೆ ಲಾಕ್ ಆಗಿದ್ದಾನೆ.
ತಂಗಿ ಗಂಡನ ಕೊಲೆಗೆ ಯತ್ನಿಸಿ ಕೊನೆಗೆ ಸಿಸಿಬಿ ಪೊಲೀಸರ ಕೈಯಲ್ಲಿ ತಗಲಾಕಿಕೊಂಡ ಘಟನೆ ಬೆಂಗಳೂರಿನ ವಿವಿ ಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಕೊಲೆಗೆ ಸ್ಕೆಚ್ ಹಾಕಿ ಮಾರಕಾಸ್ತ್ರ ಹಿಡಿದು ನಿಂತಿದ್ದ ಅರ್ಬಾಜ್, ಫೈಸಲ್, ಶೋಯೆಬ್, ನದೀಮ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಇವ್ರು ವಿವಿ ಪುರಂ ಠಾಣೆ ರೌಡಿ ಶೀಟರ್ ರಾಹುಲ್ ನನ್ನ ಹತ್ಯೆಗೈಯಲು ಪ್ಲಾನ್ ರೂಪಿಸಿದ್ರು. ಜೈಲಿನಲ್ಲಿರುವ ರೌಡಿ ಜಿಲಾಲ್ ನ ಆಣತಿಯಂತೆ ಹತ್ಯೆಗೆ ತಯಾರಿ ನಡೆದಿತ್ತು.
ಅಸಲಿಗೆ ರಾಹುಲ್ ನನ್ನ ಕೊಲೆ ಮಾಡ್ಬೇಕು ಅಂತ ಸುಪಾರಿ ಕೊಟ್ಟ ಜಿಲಾಲ್ ಬೇರಾರೂ ಅಲ್ಲ. ರಾಹುಲ್ ಹೆಂಡತಿಯ ಸ್ವಂತ ಅಣ್ಣ. ತಂಗಿ ಅನ್ಯ ಧರ್ಮದ ಯುವಕನನ್ನ ವಿವಾಹವಾಗಿದ್ದಾಳೆಂದು ಕುಪಿತಗೊಂಡಿದ್ದ ಜಿಲಾಲ್, ತನ್ನ ಹುಡುಗರಿಗೆ ಹತ್ಯೆಗೈಯಲು ಹೇಳಿದ್ದ. ಈಗ ಎಲ್ಲರೂ ಸಿಸಿಬಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ʼಪಬ್ಲಿಕ್ ನೆಕ್ಸ್ಟ್ʼ
PublicNext
17/03/2022 10:21 pm