ಬೆಂಗಳೂರು: ಬೆಂಗಳೂರಿನ ಏರಿಯಾವೊಂದರಲ್ಲಿ ಒಂದೇ ರಾತ್ರಿ ಹತ್ತಾರು ವಾಹನಗಳ ಗ್ಲಾಸ್ ನ್ನು ಲಾಂಗ್ ನಿಂದ ಪುಡಿ ಪುಡಿ ಮಾಡಿದ್ದಾರೆ.
ನಶೆಯಲ್ಲಿ ಟೂ ವೀಲರ್ ನಲ್ಲಿ ಬಂದ ಮೂವರು ರಸ್ತೆ ಪಕ್ಕ ನಿಲ್ಲಿಸಿದ್ದ ವಾಹನದ ಗ್ಲಾಸ್ ನ್ನು ಪುಡಿಮಾಡಿದ್ದಾರೆ. ಗೋವಿಂದರಾಜನಗರ, ಕಾಮಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು.ಪುಂಡರ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಂದೇ ರಾತ್ರಿ 30 ಕ್ಕೂ ಹೆಚ್ಚು ಆಟೋ ಮತ್ತು ಕಾರಿನ ಫ್ರಂಟ್ ಗ್ಲಾಸ್ ಫೀಸ್ ಫೀಸ್ ಆಗಿವೆ. ನಶೆಯಲ್ಲಿ ಏರಿಯಾದಲ್ಲಿ ಪುಂಡಾಟ ಮೆರೆದಿರೋ ಪುಂಡರ ಪತ್ತೆಗೆ ಸದ್ಯ ಖಾಕಿ ಬಲೆ ಬೀಸಿದೆ.
PublicNext
17/03/2022 03:43 pm