ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಮತ್ತೊಂದು ಮನೆಗೆ ಕನ್ನ ಹಾಕಿದ ನೇಪಾಳಿ ಗ್ಯಾಂಗ್: ಮೂರು ಕೋಟಿ ಚಿನ್ನದೊಂದಿಗೆ ಎಸ್ಕೇಪ್

ಬೆಂಗಳೂರು: ನೇಪಾಳಿಗಳಿಗೆ ಮನೆ‌ಕೆಲಸ ಕೊಟ್ಟು ಅವರನ್ನ ನಂಬಿ ಮನೆ ಕೀ ಕೊಟ್ಟು ಹೋಗ್ತಿದ್ದೀರಾ? ಕಳೆದ ತಿಂಗಳು ಬಸವೇಶ್ವರನಗರ, ಮೊನ್ನೆ ಪುಟ್ಟೇನಹಳ್ಳಿ, ನಾಳೆ ನಿಮ್ಮ ಏರಿಯಾ ನಿಮ್ಮ ಮನೆಯೂ ಇದೇ ರೀತಿ ಸುದ್ದಿ ಯಾಗಬಹುದು.! ಬಸವೇಶ್ವರನಗರಲ್ಲಿ ಮನೆ ಕೆಲಸಕ್ಕಿದ್ದ ನೇಪಾಳಿ ಗ್ಯಾಂಗ್ ಒಂದು ಕೋಟಿ ಮೌಲ್ಯದ ನಗ-ನಾಣ್ಯ ದೋಚಿ ಪರಾರಿಯಾಗಿದ್ದ ಪ್ರಕರಣ‌ ಇನ್ನೂ ಟ್ರೇಸ್ ಕೂಡ ಆಗಿಲ್ಲ. ಅಷ್ಟರಲ್ಲಾಗಲೇ ಮತ್ತೊಂದು ಮನೆಯಲ್ಲಿ ನೇಪಾಳಿ ಗ್ಯಾಂಗ್‌ನವರು ಮೂರು ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಅವರ ಮನೆಯಲ್ಲಿ ನಡೆದ ಕಳ್ಳತನ ಇದು. ಹೆಚ್ಚು ಕಮ್ಮಿ ಮೂರು ಕೆ.ಜಿ ಚಿನ್ನಾಭರಣವನ್ನ ಕಳ್ಳರು ದೋಚಿದ್ದಾರೆ. ಈ ಬಗ್ಗೆ ದೂರು ನೀಡಿದ ಚಂದ್ರಶೇಖರ್ ಮನೆಯಲ್ಲಿದ್ದ ಸಿಸಿಟಿವಿಗಳನ್ನೂ ಪೊಲೀಸರಿಗೆ ನೀಡಿದ್ದಾರೆ. ಕಾಂಗ್ರೆಸ್‌ ಮುಖಂಡ ಚಂದ್ರಶೇಖರ್ ಕುಟುಂಬ ಸಮೇತರಾಗಿ ಪ್ರವಾಸ ಹೋಗಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮನೆಯಲ್ಲಿದ್ದ ಇಬ್ಬರು ನೇಪಾಳಿ ಕೆಲಸಗಾರರು ದೋಚಿಕೊಂಡು ಪರಾರಿಯಾಗಿದ್ದಾರೆ.

ಚಂದ್ರಶೇಖರ್ ಮನೆಯಲ್ಲಿ ಇಬ್ಬರು ನೇಪಾಳಿ ಮೂಲದ ಕೆಲಸಗಾರರನ್ನ ನಂಬಿಕೆ ಮೇಲೆ ಬಿಟ್ಟು ಹೋಗಿದ್ರು. ಆದರೆ ಹಾಳುಹರಾಮಿ ಕೆಲಸ ಮಾಡಿದ ಇಬ್ಬರು ಕೆಲಸಗಾರರು ಮನೆಯಲ್ಲಿದ್ದ ತಿಜೋರಿ ಒಡೆದು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಕೆ.ಜಿ ಚಿನ್ನಾಭರಣವನ್ನ ದೋಚಿದ್ದಾರೆ. ಮನೆಯ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದಾಗ ಮತ್ತಷ್ಟು ಜನರು ಕಳ್ಳತನಕ್ಕೆ ಸಾಥ್ ನೀಡಿರೋದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಆದ್ರೆ ಈ ನೇಪಾಳಿ ಕೆಲಸಗಾರರಿಗೆ ಕೆಲಸ ಕೊಡುವ ಮುನ್ನ ಯೋಚನೆ ಮಾಡದಿದ್ರೆ ನಾಳೆ ನಿಮ್ಮ ಮನೆಗೂ ಇದೇ ಸ್ಥಿತಿ ಬರಬಹುದು ಎಚ್ಚರ...ಎಚ್ಚರ...

ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

13/03/2022 05:46 pm

Cinque Terre

50.08 K

Cinque Terre

3

ಸಂಬಂಧಿತ ಸುದ್ದಿ