ನೆಲಮಂಗಲ: ಗಾಂಜಾ ನಶೆಯಲ್ಲಿದ್ದ ಪುಡಿರೌಡಿಗಳು ಜೋಗಿ ಸ್ಟೈಲ್‌ನಲ್ಲಿ ಲಾಂಗ್ ಹಿಡಿದು ರಸ್ತೆಯಲ್ಲಿ ಶೋ ಕೊಡ್ತಾ ಕಾಲೇಜು ವಿದ್ಯಾರ್ಥಿಗಳನ್ನು ಅಟ್ಟಡಿಸುತ್ತಾ ಪುಂಡಾಟಿಕೆ ಮೆರೆದಿದ್ದಾರೆ. ಇದರಿಂದ ಬೆದರಿದ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಫ್ಯಾಕ್ಟರಿಯೊಂದರ ಶೆಡ್ ಸೇರಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿರಸ್ತೆ ಕಾಚೋಹಳ್ಳಿ ಸಮೀಪ ನೆಡೆದಿದೆ.
ಮಾಗಡಿರಸ್ತೆ ಕಾಚೋಹಳ್ಳಿಯ ವಾಣಿ ವಿದ್ಯಾಸಂಸ್ಥೆ ರಸ್ತೆಯಲ್ಲಿ ಈ ಪುಂಡರ ಅಟ್ಟಹಾಸ ಕಂಡು ಬಂದಿದೆ. ಮಟಮಟ ಮಧ್ಯಾಹ್ನ ಬರ್ತ್ ಡೇ ಪಾರ್ಟಿ ಮಾಡಿದ ಐವರ ಪುಂಡರ ಗುಂಪು, ಸಂಜೆ 3-4 ಗಂಟೆ ಸುಮಾರಿಗೆ ಕಾಲೇಜ್‌ನಿಂದ ಹೊರ ಬಂದ ವಿದ್ಯಾರ್ಥಿಗಳನ್ನು ಮದ್ಯದ ನಶೆಯಲ್ಲಿ ಪುಂಡರು ಲಾಂಗ್ ಹಿಡಿದು ಬೆದರಿಸಿ ಅಟ್ಟಡಿಸಿದ್ದಾರೆ.
ಜೋಗಿ ಸ್ಟೈಲ್‌ನಲ್ಲಿ ಲಾಂಗ್ ಹಿಡಿದು ಶೋ ಕೊಟ್ಟ ಪುಡಿರೌಡಿಗಳ ಹಾವಳಿಗೆ ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಜೀವ ಉಳಿಸಿಕೊಳ್ಳಲು ಅಕ್ಕಪಕ್ಕದ ಫ್ಯಾಕ್ಟರಿ ಶೆಡ್‌ಗಳಿಗೆ ನುಗ್ಗಿದ್ದಾರೆ. ಇದೇ ವೇಳೆ ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಪುಡಿರೌಡಿಗಳ ಪುಂಡಾಟಿಕೆ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಪುಂಡರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಚುರುಕುಗೊಳಿಸಿ ಐವರು ಪುಡಿರೌಡಿಗಳ ಪೈಕಿ ಸದ್ಯ ಮೂವರನ್ನು ಬಂಧಿಸಿದ್ದಾರೆ.
PublicNext
13/03/2022 01:45 pm