ಬೆಂಗಳೂರು: ಯುವತಿ ಜೊತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಕ್ಯಾಬ್ ಚಾಲಕನನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 9 ರ ಮಧ್ಯರಾತ್ರಿ ಸುಮಾರಿಗೆ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ. ಕಾಕೋಳು ಮೂಲದ ಚಾಲಕ ಮಂಜುನಾಥ್ ನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ರಾತ್ರಿ ಯವತಿ ಹಾಗೂ ಆತನ ಗೆಳೆಯರಿಬ್ಬರು ಪಾರ್ಟಿ ಮುಗಿಸಿ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ರು. ಕ್ಯಾಬ್ ನಿಂದ ಇಳಿಯುವಾಗ ಚಾಲಕನ ಸಹಾಯ ಕೇಳಿದ್ದಾಳಂತೆ. ಈ ವೇಳೆ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ, ರಾತ್ರೋ ರಾತ್ರಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Kshetra Samachara
10/03/2022 12:56 pm