ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಣಪ್ಪರಂ ಗೋಲ್ಡ್ ಕಂಪನಿಯಲ್ಲಿ ಕೋಟಿ ಕೋಟಿ ಅಕ್ರ‌ಮ: ನಾಲ್ವರು ಅರೆಸ್ಟ್

ಬೆಂಗಳೂರು: ಪ್ರತಿಷ್ಠಿತ ಗೋಲ್ಡ್ ಲೋನ್ ಕಂಪನಿಗಳಲ್ಲಿ ಒಂದಾದ ಮಣಪುರಂ ಗೊಲ್ಡ್ ಕಂಪನಿಯ ಯಶವಂತಪುರ ಬ್ರಾಂಚ್ ಸಿಬ್ಬಂದಿಗಳೇ ಕಂಪನಿಗೆ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಅದಷ್ಟೇ ಅಲ್ಲ ಗ್ರಾಹಕರು ಅಡಮಾನ ಇಡುವ ಚಿನ್ನ ಹಾಗೂ ನಗದಿನಲ್ಲೂ ಗೋಲ್‌ಮಾಲ್ ಮಾಡಿದ ಕೃತ್ಯ ಈಗ ಮಣಪುರಂ ಗೊಲ್ಡ್ ಲೋನ್ ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪ್ರಕರಣ ಯಶವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೂರಿನನ್ವಯ ಕಂಪನಿಯ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ.

ಆಡಿಟಿಂಗ್ ವೇಳೆ ಬ್ರಾಂಚ್ ಹೆಡ್ ಶ್ವೇತಾ ಹಾಗೂ ಎಂಟು ಮಂದಿ ಸಿಬ್ಬಂದಿ ನಡೆಸಿರೊ ಅವ್ಯವಹಾರ ಪತ್ತೆಯಾಗಿದೆ. ಒಟ್ಟಾರೆ ಪರಿಶೀಲನೆ ವೇಳೆ ಕಂಪನಿಗೆ 2 ಕೋಟಿ ನಷ್ಟ ಉಂಟು ಮಾಡಿರೋದು ಪತ್ತೆಯಾಗಿದ್ದು ಈ ಸಂಬಂಧ ತುಮಕೂರ ವಲಯದ ಮ್ಯಾನೇಜರ್ ಓಂಪ್ರಕಾಶ್ ವರ್ಮ ಯಶವಂತಪುರದ ಬ್ರಾಂಚ್ ಹೆಡ್ ಶ್ವೇತಾ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ದೂರು ದಾಖಲಾಗಿದೆ.

ಸದ್ಯ ಕಲಾವತಿ ಎಂಬುವವರು ನೀಡಿರುವ ದೂರು ಸಂಬಂಧ ಮೋನಿಷಾ ಎಂಬ ಕಂಪನಿಯ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಬಂಧಿಸಿದ ಯಶವಂತಪುರ ಪೊಲೀಸರು ಮಣಪುರಂ ಗೋಲ್ಡ್ ಕಂಪನಿ ನೀಡಿದ ದೂರಿನ ಅಡಿ ಬ್ರಾಂಚ್‌ನ ಅಸಿಸ್ಟೆಂಟ್ ಹೆಡ್ ಶಿವಕುಮಾರ್, ಸೇಲ್ಸ್ ಎಕ್ಸಿಕ್ಯುಟಿವ್ ಅಮರನಾಥ್ ಹಾಗೂ ಆಡಿಟರ್ ಶಂಕರ್‌ಗೌಡ ಎಂಬಾತರನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿಯಾಗಿರೋ ಬ್ರಾಂಚ್ ಹೆಡ್ ಶ್ವೇತಾ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagesh Gaonkar
PublicNext

PublicNext

09/03/2022 09:52 pm

Cinque Terre

38.38 K

Cinque Terre

0

ಸಂಬಂಧಿತ ಸುದ್ದಿ