ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಗೆ ಜಯನಗರ ಇನ್ ಸ್ಪೆಕ್ಟರ್ ಮಂಜುನಾಥ್ ಆಂಡ್ ಟೀಮ್ ಬ್ರೇಕ್ ಹಾಕಿದೆ. ಆನ್ ಲೈನ್- ಆಫ್ ಲೈನ್ ಕ್ಲಾಸ್ ಮಧ್ಯೆ ಎಂಟ್ರಿ ಕೊಟ್ಟು ದಂಧೆ ಬೇಧಿಸಿರೋ ಪೊಲೀಸ್ರು ದೊಡ್ಡ ಕುಳಗಳನ್ನೇ ಲಾಕ್ ಮಾಡಿದ್ದಾರೆ.
ಎಸ್ ಎಸ್ ಎಲ್ ಸಿ- ಪಿಯುಸಿ ಮಾರ್ಕ್ಸ್ ಕಾರ್ಡ್ ಜಸ್ಟ್ 25 ಸಾವಿರ ಕೊಟ್ರೆ ಸಾಕು, 20 ದಿನದಲ್ಲಿ ಕೈ ಸೇರ್ತಿತ್ತಂತೆ.
ಡಿಗ್ರಿ, ಡಬಲ್ ಡಿಗ್ರಿ ಮಾರ್ಕ್ಸ್ ಅಕೌಂಟ್ ಕೂಡ ಡಬಲ್ ಆಗ್ತಿತ್ತು. ಫೇಲ್ ಆಗಿದ್ದ, ಓದೋಕೆ ಕಷ್ಟ ಪಡ್ತಿದ್ದ ಸ್ಟೂಡೆಂಟ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದರು. ಕಷ್ಟಪಟ್ಟು ಯಾಕ್ ಓದ್ತೀರಾ!? ಆರಾಮಾಗಿ ಕೆಲಸಕ್ಕೆ ಸೇರಿ ದುಡೀರಿ,
ಮಾರ್ಕ್ಸ್ ಕಾರ್ಡ್ ನಾವ್ ಕೊಡ್ತೀವಿ ಅಂತಾ ಮೋಟಿವೇಟ್ ಮಾಡಿ ಹಣ ಪೀಕ್ತಿದ್ರು.
ಕ್ಲೋಸ್ ಆಗಿರೋ ಯುನಿವರ್ಸಿಟಿ ಹೆಸ್ರಲ್ಲಿ ಮಾರ್ಕ್ಸ್ ಕಾರ್ಡ್ ತಯಾರಿಸ್ತಿದ್ದರು ಆರೋಪಿಗಳು. ಮನೆಯಲ್ಲೇ ಪ್ರಿಂಟರ್, ಅದಕ್ಕೆ ಬೇಕಾದ ಮೆಟಿರೀಯಲ್ ಇಟ್ಟಿದ್ರು. ದಿಲೀಪ್, ಧರ್ಮೇಂದ್ರ, ನರೇಶ್, ರಘು ಬಂಧಿತರಾಗಿದ್ದು, ಇದ್ರಲ್ಲಿ ಧರ್ಮೇಂದ್ರ, ನರೇಶ್ ನದ್ದೇ ಮಾಸ್ಟರ್ ಮೈಂಡ್. ಅಭ್ಯರ್ಥಿಗಳನ್ನ ಹುಡುಕಿ ಕೊಡ್ತಿದ್ದವ ಧರ್ಮೇಂದ್ರ.
ಆರೋಪಿಗಳು ಕಾಲೇಜುಗಳಿಗೆ ಹೋಗಿ ʼಜಾಹೀರಾತುʼ ಕೊಡ್ತಿದ್ದಾಗ ಲಾಕ್ ಆಗಿದ್ದಾರೆ. ವಿದ್ಯಾರ್ಥಿಗಳಂತೆ ಬೆನ್ನಟ್ಟಿದ್ದ ಜಯನಗರ ಪೊಲೀಸರು, ಆರೋಪಿಗಳನ್ನ ಬಂಧಿಸಿ 150 ಫೇಕ್ ಮಾರ್ಕ್ಸ್ ಕಾರ್ಡ್, 4 ಲಕ್ಷ ನಗದು ವಶ ಪಡಿಸಿದ್ದಾರೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ʼಪಬ್ಲಿಕ್ ನೆಕ್ಸ್ಟ್ʼ
PublicNext
09/03/2022 10:16 am