ಬೆಂಗಳೂರು:ಬಾಡಿಗೆಗೆ ಅಂತ ಕ್ಯಾಮೆರಾ ಪಡೆಯಲು ಬಂದು ಕ್ಯಾಮೆರಾ ಜೊತೆಗೆ ಎಸ್ಕೇಪ್ ಆಗ್ತಿದ್ದ ಆರೋಪಿಯನ್ನ ಚಂದ್ರಲೇಔಟ್ ಪೊಲೀಸ್ರು ಬಂಧಿಸಿದ್ದಾರೆ.
ಪುರುಷೋತ್ತಮ್ ಬಂಧಿತ ಆರೋಪಿಯಾಗಿದ್ದು ಫೆ.22 ಚಂದ್ರಾಲೇಔಟಿನ ಇನ್ಫೆನೆಟ್ ವಿಂಗ್ ಫೋಟೋ ಸ್ಟುಡಿಯೋದಲ್ಲಿ ಕ್ಯಾಮೆರಾ ಪಡೆದು ಎಸ್ಕೇಪ್ ಆಗಿದ್ದ.ಸೋನಿ ಎಸ್ 7 ಕ್ಯಾಮೆರಾ ಪಡೆದು ಕ್ಲಾರಿಟಿ ಪರಿಶೀಲಿಸುವುದಾಗಿ ಹೇಳಿದ್ದ ಪುರುಷೋತ್ತಮ ಹೊರಗಡೆ ಫೋಟೋ ಕ್ಲಿಕ್ಕಿಸುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದ.
ಈ ಕುರಿತುಚಂದ್ರಾಲೇಔಟ್ ಠಾಣೆಗೆ ಸ್ಟುಡಿಯೋ ಮಾಲಿಕ ಚೇತನ್ ದೂರು ನೀಡಿದ್ರು.ದೂರಿನನ್ವಯ ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ 3.65 ಲಕ್ಷ ಮೌಲ್ಯದ ವಿವಿಧ ಕ್ಯಾಮೆರಾಗಳು ಸೀಜ್ ಆಗಿವೆ.
Kshetra Samachara
06/03/2022 12:22 pm