ದೊಡ್ಡಬಳ್ಳಾಪುರ:ಎಟಿಎಂ ದರೋಡೆಗೆ ಯತ್ನಿಸಿ ವಿಫಲವಾದ ಕಳ್ಳರಿಬ್ಬರು ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದಿರೋ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನೆಲಮಂಗಲದ ಅರಿಶಿನಕುಂಟೆ ಗ್ರಾಮದ 19 ವರ್ಷದ ಸಚಿನ್ ಮತ್ತು ಗಗನ್ ಬಂಧಿಸಲಾಗಿದೆ.
ಫೆಬ್ರವರಿ 24 ರಂದು ಮುಂಜಾನೆ ಮೆಳೇಕೋಟೆ ಕ್ರಾಸ್ ಬಳಿ ಇರುವ ಎಟಿಎಂ ದೋಚಲು ಇಬ್ಬರು ಆರೋಪಿಗಳು ಯತ್ನಿಸುತ್ತಿರೋದನ್ನು ಸ್ಥಳೀಯರು ಗಮನಿಸಿದ್ದಾರೆ.ಕೂಡಲೇ ಆರೋಪಿಗಳನ್ನು ಹಿಡಿಯಲು ಹೋಗಿದ್ದಾರೆ. ಇದರಿಂದ ಕಂಗಲಾದ ಆರೋಪಿಗಳು ತಪ್ಪಿಸಿಕೊಂಡು ಓಡಿದ್ದಾರೆ.
ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಕಾರಿನಲ್ಲಿ ದೊಡ್ಡಬಳ್ಳಾಪುರ ಕಡೆ ಬರುತ್ತಿದ್ದಾಗ ತಪ್ಪಿಸಿಕೊಂಡಿದ್ದ ಆರೋಪಿಗಳು ಕಾರಿಗೆ ಕೈ ಅಡ್ಡ ಹಾಕಿದ್ದು, ಡ್ರಾಪ್ ನೀಡುವಂತೆ ಕೇಳಿದ್ದಾರೆ.ತಾವಾಗಿಯೇ ಬಂದು ಹಳ್ಳಕ್ಕೆ ಬಿದ್ರು ಎಂದು ಲೆಕ್ಕಾಚಾರ ಹಾಕಿದ ಪೊಲೀಸರು, ಅವರನ್ನು ಕಾರು ಹತ್ತಿಸಿಕೊಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪಿಗಳು ತಾವೇ ಎಟಿಎಂ ದರೋಡೆಗೆ ಯತ್ನಿಸಿದ್ದು ಅನ್ನೋ ಸತ್ಯ ಒಪ್ಪಿಕೊಂಡಿದ್ದಾರೆ.
ಆರೋಪಿಗಳಾದ ಸಚಿನ್ ಹಾಗೂ ಗಗನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರೋ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
26/02/2022 07:22 pm