ಬೆಂಗಳೂರು: ಚಿನ್ನಾಭರಣ ವಂಚಿಸಲು ಥೇಟ್ ಚಿನ್ನದ ವ್ಯಾಪಾರಿಗಳಂತೆ ಚಿನ್ನದಂಗಡಿ ತೆರೆದು ಆಭರಣ ದೋಚುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾಟನ್‌ಪೇಟೆಯಲ್ಲಿ ಅಕ್ಕಸಾಲಿಗನಾಗಿದ್ದ ಸೋಹಿದುಲ್ ಮೊಂಡೆಲ್ ನೀಡಿದ ದೂರಿನ ಮೇರೆಗೆ ಈ ಹಿಂದೆ ಆರೋಪಿ ಫರ್ಹಾನ್ ಅಬ್ಬಾಸ್ ಎಂಬಾತನನ್ನು ಬಂಧಿಸಿ 5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿತ್ತು.
ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಮತ್ತಿಬ್ಬರು ಆರೋಪಿಗಳಾದ ಸೈಯದ್ ಊರ್ಜ್ ಸೈಯ್ಯದ್ ಮುಮ್ತಾಜ್ ಎಂಬುವರನ್ನು ಬಂಧಿಸಿ 10 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಜಪ್ತಿ ಮಾಡಿಕೊಂಡಿದ್ದಾರೆ.
ಸದ್ಯ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಇನ್ಸ್ಪೆಕ್ಟರ್ ಶ್ರೀನಿವಾಸ್ ಅಂಡ್ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಗೌರಿಬಿದನೂರು ಮೂಲದ ಫರ್ಹಾನ್ ಹಾಗೂ ಆತನ ಸ್ನೇಹಿತರು ಮಾಸ್ಟರ್ ಪ್ಲ್ಯಾನ್ ಮಾಡಿ ರಾಜಾಜಿನಗರದ ಬಾಷ್ಯಂ ಸರ್ಕಲ್ ಬಳಿ ಅಂಗಡಿ ಬಾಡಿಗೆ ಪಡೆದಿದ್ದರು. ವಸುಂಧರ ಜ್ಯೂವೆಲ್ಲರಿ ಶಾಪ್ ಹೆಸರಿನಲ್ಲಿ ಚಿನ್ನದ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೊಂಡು ವಿವಿಧ ಮಾದರಿಯ ಚಿನ್ನದ ಡಿಸೈನ್ ಬೇಕಾಗಿದೆ ಎಂದು ದೂರುದಾರರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಚಿನ್ನ ಆರ್ಡರ್ ಮಾಡಿದ್ದರು. ಹೊಸದಾಗಿ ತೆರೆದಿದ್ದ ಜ್ಯೂವೆಲ್ಲರಿ ಶಾಪ್ ಗೆ ಆರೋಪಿಗಳು ಖರೀದಿ ಸೋಗಿನಲ್ಲಿ ಆರ್ಡರ್ ಕೊಟ್ಟಿದ್ದ ಚಿನ್ನವನ್ನು ಚೆಕ್ ಮಾಡುವಾಗಿ ಬರುವುದಾಗಿ ಹೇಳಿ ಅಲ್ಲಿಂದ ಅಂಗಡಿ ಬಿಟ್ಟು ಎಸ್ಕೇಪ್ ಆಗಿದ್ರು.
Kshetra Samachara
24/02/2022 05:29 pm