ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕಲಿ ದಾಖಲೆ: 13 ಜನರನ್ನ ಕೈಬಿಟ್ಟು ವಂಶವೃಕ್ಷ ಮಾಡಿಸಿದ ಭೂಪ

ದೊಡ್ಡಬಳ್ಳಾಪುರ: 7 ಗಂಡು ಮಕ್ಕಳು 7 ಹೆಣ್ಣು ಮಕ್ಕಳನ್ನೊಳಗೊಂಡ ದೊಡ್ಡ ವಂಶ, ಪಿತ್ರಾರ್ಜಿತವಾಗಿ ಅವರಿಗೆಲ್ಲ ಆಸ್ತಿ ಸೇರಬೇಕಿತ್ತು ಆದರೆ ವಂಶವೃಕ್ಷದಲ್ಲಿ 13 ಜನರನ್ನ ಕೈಬಿಟ್ಟು ತನ್ನ ಹೆಸರಿಗೆ ವಂಶವೃಕ್ಷ ಮಾಡಿಸಿಕೊಂಡು ಪಿತ್ರಾರ್ಜಿತ ಆಸ್ತಿಯನ್ನ ಒಬ್ಬರೇ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರಪಾಳ್ಯದ ಸರ್ವೆ ನಂಬರ್ 100/2 ರ 9 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ವಂಶವೃಕ್ಷ ಬಳಸಿ ಪವತಿ ಖಾತೆ ಮಾಡಿರುವ ಆರೋಪ ಕೇಳಿ ಬಂದಿದೆ.

4ನೇ ತಲೆಮಾರಿನ ಪಿತ್ರಾರ್ಜಿತ ಆಸ್ತಿ ಈಗ 14 ಮಕ್ಕಳ ಪಾಲಿಗೆ ಬಂದಿದೆ, ಇದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ ಇದರಲ್ಲಿನ ಒಬ್ಬ 13 ಜನರನ್ನ ಹೊರಗಿಟ್ಟು ತನ್ನ ಹೆಸರಿನಲ್ಲಿ ವಂಶವೃಕ್ಷ ಮಾಡಿಕೊಂಡು ಪಿತ್ರಾರ್ಜಿತ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾಗಿ ಉಳಿದವರು ಆರೋಪ ಮಾಡಿದ್ದಾರೆ.

ಸರ್ವೆ ನಂಬರ್ 100/2 ರ ಮೂಲ ವ್ಯಕ್ತಿ ವಸಂತಪ್ಪ, ವಸಂತಪ್ಪನಿಗೆ ಪಾಪಿಗ, ಬೈಲಮ್ಮ, ಕೆಂಪಮ್ಮ, ಕಾವಲಪ್ಪ ಎಂಬ 4 ಮಕ್ಕಳು, ಪಾಪಿಗನಿಗೆ ಮದುವೆಯಾಗಿದೆ ಆದರೆ ಮಕ್ಕಳಿರಲಿಲ್ಲ, ಕೆಂಪಮ್ಮರಿಗೂ ಮದುವೆಯಾಗಿತ್ತು ಮಕ್ಕಳಿರಲಿಲ್ಲ, ಕಾವಲಪ್ಪನಿಗೆ ಮದುವೆಯಾಗಿರಲಿಲ್ಲ, ಬೈಲಮ್ಮರವರಿಗೆ ಮದುವೆ ಯಾಗಿ ತಿಮ್ಮರಾಯಪ್ಪ ಮತ್ತು ವೆಂಕಟೇಶಪ್ಪ ಎಂಬ ಇಬ್ಬರು ಮಕ್ಕಳಿದ್ದರು, ವೆಂಕಟೇಶಪ್ಪನಿಗೆ 7 ಗಂಡು ಮತ್ತು 7 ಹೆಣ್ಣು ಮಕ್ಕಳಿದ್ದರು, ಈಗ ಈ 14 ಮಕ್ಕಳು ಪಿತ್ರಾರ್ಜಿತ ಆಸ್ತಿಯ ವಾರಸ್ಥಾರರಾಗಿದ್ದಾರೆ.

ವೆಂಕಟೇಶಪ್ಪನವರ ಎರಡನೇ ಮಗಳಾದ ಸುಬ್ಬಮ್ಮಳ ಮಕ್ಕಳು ಇಡೀ ಆಸ್ತಿಯನ್ನ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಇನ್ನುಳಿದ 13 ಜನರನ್ನ ವಂಶವೃಕ್ಷದಿಂದ ಹೊರಗಿಟ್ಟಿದ್ದಾರೆ.

13 ಜನರ ಗಮನಕ್ಕೆ ಬರದಂತೆ ನಕಲಿ ವಂಶವೃಕ್ಷ ಕೊಟ್ಟು ಮುನಿಯಪ್ಪ, ಕೃಷ್ಣಮೂರ್ತಿ ಮತ್ತು ಕೆಂಪಮ್ಮ ಹೆಸರಿಗೆ 2021ರ ಫೆಬ್ರವರಿ 18 ರಂದು ಜಂಟಿ ಖಾತೆ ಮಾಡಿಸಿದ್ದಾರೆ.

ಪಿತ್ರಾರ್ಜಿತ ಆಸ್ತಿ ಸುಬ್ಬಮ್ಮಳ ಮಕ್ಕಳಿಗೆ ಪವತಿಯಾಗಿರುವ ವಿಷಯ ತಿಳಿದು ಇನ್ನುಳಿದ 13 ಜನರು ಮತ್ತೊಂದು ವಂಶವೃಕ್ಷಕ್ಕೆ ಕನಸವಾಡಿ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದು 1 ವರ್ಷದಿಂದ ವಂಶಿಕೃಷ್ಣವನ್ನ ಮಾಡಿಕೊಟ್ಟಿಲ್ಲವೆಂದು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನೆರವಿನಿಂದ ಅಕ್ರಮವಾಗಿ ವಂಶವೃಕ್ಷ ಮಾಡಿಕೊಟ್ಟಿದ್ದರೆಂದು ಆರೋಪ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

23/02/2022 01:17 pm

Cinque Terre

1.81 K

Cinque Terre

0

ಸಂಬಂಧಿತ ಸುದ್ದಿ