ಬೆಂಗಳೂರು: ಎರಡನೇ ಮದುವೆ ಅಂತ ಗೊತ್ತಿದ್ರು ಜೀವನ ಚೆನ್ನಾಗಿರುತ್ತೆ ಅಂತ ಒಪ್ಪಿ ಮದುವೆ ಆಗಿದ್ಳು ಆಕೆ,ಮೂರು ವರ್ಷ ಸಂಸಾರ ನಡೆಸಿದ ನಂತರ ಗಂಡ ಹೆಂಡತಿಯನ್ನು ಮೂದಳಿಸಿ ನಿತ್ಯ ಕಿರುಕುಳ ನೀಡ್ತಿದ್ದ. ಇದೇ ಕಾರಣಕ್ಕೆ ಪತ್ನಿ ಇಬ್ಬರು ಪುಟ್ಟಮಕ್ಕಳನ್ನು ತಬ್ಬಲಿ ಮಾಡಿ ಸಾವಿನ ಮನೆ ಸೇರಿದ್ದಾಳೆ.
ಕಣ್ಣೀರು ಹಾಕ್ತಿರೊ ಈ ಕುಟುಂಬದ ಗೋಳು ಹೇಳತೀರದು. ಈ ಗೋಳಾಟಕ್ಕೆ ಕಾರಣವಾಗಿದ್ದು ಇವರ ಮಗಳು ಅನಿಶಾ ಸಾವು. ಫೋಟೊದಲ್ಲಿ ಕಾಣ್ತಿರೊ ಈ ದಂಪತಿ ಹೆಸರು ನಿಜಾಮುದ್ದೀನ್ ಮತ್ತು ಅನಿಶಾ.ಮೂರು ವರ್ಷದ ಹಿಂದೆ ನಿಜಾಮುದ್ದಿನ್ ಗೆ ಎರಡನೇ ಪತ್ನಿಯಾಗಿ ವಿವಾಹವಾಗಿದ್ದ ಅನಿಶಾ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ವಾಸವಾಗಿದ್ರು. ಗಂಡ ಒಂದೆಡೆ ವರದಕ್ಷಿಣೆ ಕಿರುಕುಳ ನೀಡ್ತಿದ್ರೆ. ಇನ್ನೊಂದೆಡೆ ನೀನು ಕುರೂಪಿ, ಸುಂದರವಾಗಿಲ್ಲ ಬೇಗ ಸತ್ತು ಹೋಗು ಬೇರೆ ಮದುವೆ ಮಾಡಿಕೊಳ್ತಿನಿ ಅಂತ ಪದೇ ಪದೇ ಕಿರುಕುಳ ಕೊಡ್ತಿದ್ದನಂತೆ.
ಇದೇ ವಿಚಾರಕ್ಕೆ ಮನನೊಂದು ಫೆ 17 ರ ಮಧ್ಯ ರಾತ್ರಿ ಅನಿಶಾ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಕೊಂಡಿದ್ದಾರೆ.ಬೆಂಕಿ ನಂದಿಸಿ ಗಾಯಾಳು ಅನಿಶಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು .ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅನಿಶಾ ಸಾವನ್ನಪ್ಪಿದ್ದಾಳೆ.
ಇನ್ನು ಘಟನೆ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.ಮತ್ತೊಂದು ಕಡೆ ಮಹಿಳೆ ಪೋಷಕರು ಅನಿಶಾಳನ್ನು ನಿಜಾಮುದ್ದಿನ್ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
PublicNext
23/02/2022 11:31 am