ಬೆಂಗಳೂರು: ಅನುಮಾನ ಅನ್ನೋದು ಒಮ್ಮೆ ತಲೆಗೋದ್ರೆ ಮುಗೀತು, ಅದು ಮತ್ತೆ ವಾಸಿನೇ ಆಗೋದಿಲ್ಲ ಬಿಡಿ. ಹಾಗೇನೆ ಪತ್ನಿ ಶೀಲದ ಬಗ್ಗೆ ಸದಾ ಅನುಮಾನ ವ್ಯಕ್ತಪಡಿಸ್ತಿದ್ದ ಪತಿ, ಹೆಂಡತಿಗಾಗಿ ಬೇರೆ ಮನೆ ಕೂಡ ಮಾಡಿದ್ದ.ಆದ್ರೂ ಪತ್ನಿ ಹಳೆ ಸ್ನೇಹಿತನ ಸಾಂಗತ್ಯ ಬಿಟ್ಟಿರ್ಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಪತಿರಾಯ ಪತ್ನಿ ಜೊತೆಗೆ ಪತ್ನಿ ತಾಯಿನ್ನು ಕೊಂದು ಪೊಲೀಸ್ರಿಗೆ ಶರಣಾಗಿದ್ದಾನೆ.
ನಗರದ ಮೂಡಲಪಾಳ್ಯ ನಿವಾಸಿಯಾಗಿರೋ ರವಿಕುಮಾರ್, ಪತ್ನಿ ಸುನಿತಾ ಹಾಗೂ ಅತ್ತೆ ಸರೋಜಮ್ಮನನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಮೂಲತಃ ತೀರ್ಥಹಳ್ಳಿಯ ರವಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಎಳನೀರು ವ್ಯಾಪರ ಮಾಡ್ತಿದ್ದ. ಆರು ತಿಂಗಳ ಹಿಂದಷ್ಟೇ ಮೂಡಲಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ.
ಪತ್ನಿ ಅನೈತಿಕ ಸಂಬಂಧ ಹೊಂದಿರುವುದಾಗಿ ಶಂಕಿಸಿ ಆಗಾಗ ಇಬ್ಬರ ನಡುವೆ ಜಗಳವಾಗುತಿತ್ತು.ಇದೇ ವಿಚಾರಕ್ಕಾಗಿ ನಿನ್ನೆಯೂ ಸಹ ಗಲಾಟೆಯಾಗಿತ್ತು.ಇಂದು ಬೆಳಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿ ಪತ್ನಿಯೊಂದಿಗೆ ಜಗಳ ತೆಗೆದಿದ್ದ ರವಿ, ಎಳನೀರು ಕೊಚ್ಚುವ ಮಚ್ಚಿನಿಂದ ಪತ್ನಿಯ ಕುತ್ತಿಗೆ ಸೀಳಿದ್ದಾನೆ. ಅತ್ತೆ ಸರೋಜಮ್ಮ ಮೇಲೂ ಮಚ್ಚು ಬೀಸಿದ್ದಾನೆ.ರಕ್ತಸ್ರಾವಗೊಂಡು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕೃತ್ಯದ ಬಳಿಕ ಗೋವಿಂದರಾಜನಗರ ಪೊಲೀಸರ ಮುಂದೆ ಹಾಜರಾಗಿ ಹತ್ಯೆ ಬಗ್ಗೆ ಮಾಹಿತಿ ನೀಡಿ ಸರೆಂಡರ್ ಆಗಿದ್ದಾನೆ.
PublicNext
22/02/2022 10:12 pm