ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಂಡ್ ಸಿನಿಮಾ ಸ್ಟೈಲ್ ಅಲ್ಲಿ ಅಂದರ್ ಬಾಹರ್ ಆಟ-ಡಿವೈಸ್ ಮೂಲಕ ಕಾರ್ಡ್ ಸ್ಯ್ಕಾನ್ ಮಾಡ್ತಿದ್ದ ಜಾಲ ಪತ್ತೆ

ಬೆಂಗಳೂರು: ಅಂದರ್ ..ಬಾಹರ್ .. ಅಂದರ್ ..‌ಬಾಹರ್. ಈ ಆಟ ಅದೆಷ್ಟು ಮನೆಗಳನ್ನ ಆಳು ಮಾಡಿದ್ಯೋ. ಅದೆಷ್ಟು ಕುಟುಂಬಗಳನ್ನ ಬೀದಿಗೆ ತಂದಿದ್ಯೋ ಲೆಕ್ಕ ಇಲ್ಲ. ಅಂತಹದೊಂದು ಮನೆಹಾಳು ಆಟದಲ್ಲಿ ಡಿಜಿಟಲ್ ಚೀಟಿಂಗ್ ಕೂಡ ಶುರಯವಾಗಿದೆ.

ಇದು ಸೀನ್ ನೋಡಿದ್ರೆ ಯಾವ್ದೋ ಸಿನಿಮಾ ಅನ್ಸುತ್ತೆ. ಆದ್ರೆ ಇದು ರೀಲ್ ಅಲ್ಲ. ರಿಯಲ್. ಇಸ್ಟೀಟ್ ಆಟದಲ್ಲಿ ಕಾರ್ಡ್ ನ ಸ್ಕ್ಯಾನ್ ಮಾಡಿ ಆಟ ಆಡ್ತಾರೆ. ಅಂದ್ರೆ ಯಾರಾದ್ರೂ ನಂಬ್ತಾರಾ.? ಪೊಲೀಸ್ರೇ ಮೊದಲಿಗೆ ಇಂತದೊಂದು ಕೇಸ್ ಬಂದಾಗ ನಂಬಿರ್ಲಿಲ್ಲ. ಆದ್ರೆ ಇದು ಇಂತದೊಂದು ಜಾಲವನ್ನ ಯಶವಂತಪುರ ಪೊಲೀಸ್ರು ಪತ್ತೆ ಹಚ್ಚಿದ್ದಾರೆ.

ಜುಜೂ ಕೋರರಿಗೆ ಆತ್ಯಾಧುನಿಕ ಡಿವೈಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಯಶವಂತಪುರ ಪಿಎಸ್‌ಐ ರಾಜು ಅಂಡ್ ಟೀಂ ಬಂಧಿಸಿದ್ದಾರೆ. ಪರ್ಧಿನ್ ಖಾನ್ ಬಂಧಿತ ಆರೋಪಿಯಾಗಿದ್ದು, ನಗರದಲ್ಲಿ ಇಸ್ಟೀಟ್ ಆಡುವ ದಂಧೆಕೋರರಿಗೆ ಡಿವೈಸ್ ಮಾರಾಟ ಮಾಡುತ್ತಿದ್ದ ಫರ್ದೀನ್, ದೆಹಲಿಯಿಂದ 25 ಸಾವಿರಕ್ಕೆ ಡಿವೈಸ್ ಖರೀದಿಸಿ 40 ಸಾವಿರಕ್ಕೆ‌ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ.

ಇನ್ನೂ ಈ ಡಿವೈಸ್ ಹೇಗೆ ವರ್ಕ್ ಆಗುತ್ತೆ ಅಂತ ನೋಡೋದಾದ್ರೆ. ಈ ಡಿವೈಸ್ ಚೀನಾ ನಿರ್ಮಿತಾ ಡಿವೈಸ್, ಮೊಬೈಲ್, ಪವರ್ ಬ್ಯಾಂಕ್, ರಿಮೋಟ್ ಕೀ ರೂಪದಲ್ಲಿರುವ ಡಿವೈಸ್ ಗೆ ಆಟದ ಮೊದಲು ಕಾರ್ಡ್ ಸ್ಕ್ಯಾನ್ ಮಾಡಲಾಗುತ್ತೆ. ನಂತರ ಆಟ ಶುರುವಾದ ಮೇಲೆ ಎದುರಾಳಿ ಹೇಳೋ ಹುಕಂ‌ ನಂಬರ್ ನ‌‌ ಡಿವೈಸ್ ನಲ್ಲಿ ಲಾಕ್ ಮಾಡ್ತಾರೆ. ಹೀಗೆ ಲಾಕ್ ನಂಬರ್ ಡಿವೈಸ್ ನಲ್ಲಿ ಅಂದರ್ ಆಗುತ್ತೋ ಬಾಹರ್ ಆಗುತ್ತೋ ಅನ್ನೋದನ್ನ ಇಂಡಿಕೇಟ್ ಮಾಡುತ್ತೆ. ಈ ಇಂಡಿಕೇಷನ್ ಮೇಲ್ ಬೆಟ್ ಮಾಡೋ ಆಸಾಮಿಗಳು ಲಕ್ಷ ಲಕ್ಷ ದುಡ್ಡು ಮಾಡ್ತಿದ್ರು.

ಸದ್ಯ ಪಿ.ಎಸ್‌.ಐ ರಾಜು ಅಂಡ್ ಟೀಂ ಈ ಟೀಂ‌ ಆರೋಪಿ ಫರ್ದೀನ್ ನ ಅರೆಸ್ಟ್ ಮಾಡಿ ಲಕ್ಷಾಂತರ ಮೌಲ್ಯದ ಡಿವೈಸ್ ಹಾಗೂ ಕಾರ್ಡ್ಸ್ ನ ಸೀಜ್ ಮಾಡಿದ್ದಾರೆ. ಇನ್ನೂ ಇವ್ರು ಯಾರಿಗೆಲ್ಲಾ ಡಿವೈಸ್ ಮಾರಿದ್ದಾರೆಂದು ಪೊಲೀಸ್ರು ತಲಾಶ್ ಮಾಡ್ತಿದ್ದಾರೆ.

-ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್

Edited By : Shivu K
PublicNext

PublicNext

19/02/2022 09:05 pm

Cinque Terre

50.44 K

Cinque Terre

6

ಸಂಬಂಧಿತ ಸುದ್ದಿ