ಬೆಂಗಳೂರು: ರಾತ್ರೋ ರಾತ್ರಿ ಗಾರ್ಮೆಂಟ್ ಫ್ಯಾಕ್ಟರಿ ಮುಂದೆ ನಿಂಬೆ ಹಣ್ಣು ತುಳಿದು ನಿವೃತ್ತ ಎಎಸ್ ಐ ಪತ್ನಿ ವಾಮಚಾರ ಪ್ರಯೋಗ ನಡೆಸಿದ್ದಾರೆ. ಕಸದ ವಿಚಾರಕ್ಕೆ ಶುರುವಾದ ಗಲಾಟೆಗೆ ವಾಮಚಾರ ಮಾಡಿದ್ದಾರೆಂದು ಹೇಳಲಾಗ್ತಿದೆ.
ಪೀಣ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಚನ್ನನಾಯಕಹಳ್ಳಿ ಬಳಿ ಕಸದ ವಿಚಾರಕ್ಕೆ ನೆರೆಹೊರೆಯವರ ನಡುವೆ ಜಗಳಕ್ಕೆ ಮಾಡಿಕೊಂಡಿದ್ದಾರೆ.
ಅನಿತಾ ಎಂಬುವವರು ಇಲ್ಲಿ ಗಾರ್ಮೆಂಟ್ ನಡೆಸ್ತಿದ್ರು.ಗಾರ್ಮೆಂಟ್ ಪಕ್ಕದಲ್ಲೆ ನಿವೃತ್ತ ಎಎಸ್ ಐ ಜವರೇಗೌಡ ಖಾಲಿ ಸೈಟ್ ಕೂಡ ಇದೆ.ಖಾಲಿ ಸೈಟ್ ನಲ್ಲಿ ಕಸ ಹಾಕುವ ವಿಚಾರಕ್ಕೆ ಗಾರ್ಮೆಂಟ್ ಮಾಲೀಕರು ಮತ್ತು ಜವರೇಗೌಡ ಕುಟುಂಬದ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು
ಇದೇ ಕಾರಣಕ್ಕಾಗಿ ಗಾರ್ಮೆಂಟ್ಸ್ ಸ್ಥಳಾಂತರಿಸಲು ಅನಿತಾ ಸಿದ್ಧತೆ ನಡೆಸಿದ್ರು. ಈ ಮಧ್ಯೆ ಜವರೇಗೌಡರ ಪತ್ನಿ ಲಕ್ಷ್ಮಮ್ಮ ಗಾರ್ಮೆಂಟ್ ಮುಂದೆ ನಿಂಬೆಹಣ್ಣು ತುಳಿದು ವಾಮಚಾರ ಮಾಡಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಾಮಚಾರ ಪ್ರಶ್ನಿಸಿ ಅನಿತಾ ಕುಟುಂಬಸ್ಥರು ಮತ್ತು ಲಕ್ಷ್ಮಮ್ಮ ಕುಟುಂಬಸ್ಥರು ಕೈ-ಕೈ ಮಿಲಾಸಿಕೊಂಡಿದ್ದಾರೆ. ಗಲಾಟೆ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಸದ್ಯ ದೃಶ್ಯ ಆಧಾರದ ಮೇಲೆ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
17/02/2022 08:22 pm