ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ರಾಬರಿಗೆ ಯತ್ನ, ಕೊಲೆಯಾದ ಕಳ್ಳ

ಬೆಂಗಳೂರು: ನಗರದಲ್ಲಿ ರಾತ್ರಿವೇಳೆ ಮೊಬೈಲ್ ರಾಬರಿ ನಿನ್ನೆ ಮೊನ್ನೆಯ ವಿಚಾರವಲ್ಲ.ಎಷ್ಟು ಜಾಗ್ರತೆ ವಹಿಸಿದರು ಕಳ್ಳರು ಕೈಚಳಕ ತೋರಿಸಿ ಕಳ್ಳತನ ಮಾಡ್ತಾರೆ.ಆದ್ರೆ ನಿನ್ನೆ ತಡ ರಾತ್ರಿ ನಡೆದ ಘಟನೆ ಇದಕ್ಕೆ ವಿರುದ್ಧವಾಗಿದೆ.ರಸ್ತೆಯಲ್ಲಿ ಅಡ್ಡಗಟ್ಟಿ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದ ಕಳ್ಳನ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ ಹಾಗೂ ಇದರ ಪರಿಣಾಮ ಮೊಬೈಲ್ ಕಳ್ಳ‌ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶರತ್ ನನ್ನ ನಿನ್ನೆ ರಾತ್ರಿ ಮೃತ ಮಂಜುನಾಥ್ ಆತನ ಇಬ್ಬರು ಸ್ನೇಹಿತರು ಅಡ್ಡಗಟ್ಟಿದ್ದಾರೆ. ಈ ವೇಳೆ ಮೊಬೈಲ್ ಕೊಡುವಂತೆ ಮಂಜುನಾಥ್ ಧಮ್ಕಿ ಹಾಕಿದ್ದಾರೆ. ಮೊಬೈಲ್ ಕೊಡಲು ನಿರಾಕರಿಸಿದ ಶರತ್ ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಇಬ್ಬರ ಜಗಳವಾಡಿಕೊಂಡಿದ್ದಾರೆ.

ಈ ವೇಳೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಅಲ್ಲೇ ಸಿಮೆಂಟ್ ಕಲ್ಲಿನಿಂದ ಮಂಜುನಾಥ್ ಶರತ್ ಕಾಲಿಗೆ ಹೊಡೆದಿದ್ದ, ಇದಕ್ಕೆ ಪ್ರತಿರೋಧವಾಗಿ ಅದೇ ಕಲ್ಲನ್ನು ಕಸಿದು ಮಂಜುನಾಥ್ ತಲೆ ಮೇಲೆ ಹೊಡೆದಿದ್ದಾನೆ ಶರತ್. ಕುಡಿದು ಟೈಟಾಗಿದ್ದ ಮಂಜುನಾಥ್ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌ ಜೊತೆಯಲಿದ್ದ ಇಬ್ಬರು ಸ್ನೇಹಿತರು ಪರಾರಿಯಾಗಿದ್ದು,ಕೃತ್ಯ ಎಸಗಿದ ಬಳಿಕ ಕೋಣನಕುಂಟೆ ಪೊಲೀಸರಿಗೆ ಆರೋಪಿ ಶರತ್ ಸರೆಂಡರ್ ಆಗಿದ್ದಾನೆ.

Edited By : Nagesh Gaonkar
PublicNext

PublicNext

15/02/2022 09:56 pm

Cinque Terre

29.43 K

Cinque Terre

2

ಸಂಬಂಧಿತ ಸುದ್ದಿ