ಬೆಂಗಳೂರು: ನಗರದ ಹೊಟೇಲ್‌ಗೆ ಮಧ್ಯರಾತ್ರಿ ಕಳ್ಳರ ಗುಂಪು ಲಗ್ಗೆಯಿಟ್ಟಿದೆ. ಮೊಬೈಲ್ ಟಾರ್ಚ್ ಹಿಡಿದು ಹೊಟೇಲ್‌ಗೆ ನುಗ್ಗಿದ ಕಳ್ಳರು ರಾಡ್ ನಿಂದ ಲಾಕರ್ ಬೀಗ ಮುರಿದು ಕಳ್ಳತನ ಮಾಡ್ತಿದ್ದಾರೆ.
ಕಳೆದ 12 ನೇ ತಾರೀಖಿನ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಯನಗರದ ನೈವೇದ್ಯ ಹೊಟೇಲ್‌ನಲ್ಲಿ ಘಟನೆ ನಡೆದಿದ್ದು,ಕಳ್ಳರು ಈ ಕೃತ್ಯಕ್ಕೆ ಕದ್ದ ಬೈಕ್ ಬಳಸಿದ್ದಾರೆ ಎಂದು ಹೇಳಲಾಗ್ತಿದೆ. ಶೆಟರ್ ಬೀಗ ಒಡೆದು ಹೊಟೇಲ್ ಒಳಗೆ ನುಗ್ಗಿರೋ ಕಳ್ಳರು, ಮೊಬೈಲ್ ಟಾರ್ಚ್ ಹಿಡಿದು ಹೊಟೇಲ್ ಪೂರ್ತಿ ಸರ್ಚ್ ಮಾಡೋಕಳ್ಳರು,ಹಣ ಇಟ್ಟಿರುವ ಲಾಕರ್ ಕಂಬಿಯಿಂದ ಆರಾಮಾಗಿ ಮುರಿದು ಕಳ್ಳತನಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಾಕರ್‌ನಲ್ಲಿದ್ದ ಎರಡೂವರೆ ಲಕ್ಷ ಹಣ ಕದ್ದು, ಕದ್ದ ಹಣ ಕವರ್‌ನಲ್ಲಿ ಹಾಕಿಕೊಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ.ಸದ್ಯ ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.
Kshetra Samachara
14/02/2022 02:42 pm