ಬೆಂಗಳೂರು: ಒಂದು ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ, ಮಾಜಿ ಕಾರ್ಪೊರೇಟರ್ ನನ್ನು ಆಂಧ್ರ ಪೊಲೀಸ್ರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್ ನಲ್ಲಿ ಜಾಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಆರೋಪದಡಿ ಮಾಜಿ ಕಾರ್ಪೊರೇಟರ್ ಕೆ.ದೇವದಾಸ್ ನನ್ನು ಮದನಪಲ್ಲಿ ಪೊಲೀಸ್ರು ಇಂದು ಮುಂಜಾನೆ ಬಿಟಿಎಂ ಬಡಾವಣೆಯಲ್ಲಿ ಬಂಧಿಸಿದ್ದಾರೆ.
ಮದನಪಲ್ಲಿ ಶಾಸಕ ಮೊಹಮ್ಮದ್ ನವಾಜ್ ಪಾಷಾ ನೀಡಿದ ದೂರಿನಂತೆ ದೇವದಾಸ್ ನನ್ನು ಬಂಧಿಸಲಾಗಿದೆ.
ಈ ಹಿಂದೆ ಬಿಟಿಎಂ ವಾರ್ಡ್ ಜೆಡಿಎಸ್ ಕಾರ್ಪೊರೇಟರ್ ಆಗಿದ್ದ ದೇವದಾಸ್, ಸದ್ಯ ಹಾಲಿ
ಬಿಜೆಪಿ ಮುಖಂಡ.
ದೇವದಾಸ್ 2 ವರ್ಷ ಹಿಂದೆ ಮದನಪಲ್ಲಿ ಶಾಸಕರಿಗೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಜಾಗ ಕೊಡಿಸುವುದಾಗಿ ನಂಬಿಸಿದ್ದ. 2019ರಲ್ಲಿ ಹಂತ-ಹಂತವಾಗಿ 1 ಕೋಟಿ ಹಣವನ್ನು ಶಾಸಕರು ಬ್ಯಾಂಕ್ ಅಕೌಂಟ್ ಮೂಲಕ ವರ್ಗಾವಣೆ ಮಾಡಿದ್ದರು.
ಹಣ ನೀಡಿ 2 ವರ್ಷವಾದರೂ ಜಾಗವನ್ನು ನೀಡಿಲ್ಲ, ಕೊಟ್ಟ ಹಣವನ್ನೂ ನೀಡಿಲ್ಲ ಎಂದು ಶಾಸಕರು ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಮದನಪಲ್ಲಿ ಪೊಲೀಸರು ದೇವದಾಸನನ್ನು ಬಂಧಿಸಿ, ಕರೆದೊಯ್ದಿದ್ದಾರೆ.
PublicNext
14/02/2022 02:24 pm