ಬೆಂಗಳೂರು: ಪ್ರತಿಷ್ಟಿತ ಖಾಸಗಿ ಕಾಲೇಜ್‌ನ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ 1 ಕೆ.ಜಿ ಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ. ವಿದ್ಯಾರ್ಥಿಗಳ ಬಳಿ ಗಾಂಜಾ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಹುಡುಗರನ್ನ ಲಾಕ್ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಡರಾತ್ರಿ ಬ್ಯಾಡರಹಳ್ಳಿಯ ಇನ್ ಕಂ ಟ್ಯಾಕ್ಸ್ ಲೇಔಟ್ ಬಳಿ ಈ ಘಟನೆ ನಡೆದಿದ್ದು, ಗಾಂಜ ಸೇವಿಸಿ ಸೇವಿಸಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡುತ್ತಿರೋದಾಗಿ ಸ್ಥಳೀಯರು ಆರೋಪ ಮಾಡಿದ್ದಾರೆ. ಫೆಬ್ರವರಿ 11 ರ ರಾತ್ರಿ ಕಾಲೇಜ್ ಬ್ಯಾಗ್‌ನಲ್ಲಿ ಗಾಂಜಾ ಸಪ್ಲೈ ಮಾಡ್ತಿದ್ದಾಗೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ವಿದ್ಯಾರ್ಥಿಗಳು ವಾಸವಿದ್ದ ಮನೆಯಲ್ಲಿ ಡ್ರಗ್ ಕೂಡ ಪತ್ತೆಯಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರೋ ಬ್ಯಾಡರಹಳ್ಳಿ ಪೋಲಿಸರು ಅಭಿಜಿತ್ ಮತ್ತು ನಿತಿನ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಕೇರಳದಿಂದ ಗಾಂಜಾ ತಂದು ಇಲ್ಲಿ ಕಾಲೇಜು ಹುಡುಗರ ಮೂಲಕ ಮಾರಾಟ ಮಾಡ್ತಿದ್ರು ಎನ್ನಲಾಗಿದೆ. ಸದ್ಯ ಕೇರಳ ಮೂಲದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.
PublicNext
13/02/2022 05:01 pm