ಬೆಂಗಳೂರು: ವಕೀಲ ಜಗದೀಶ್ ಮತ್ತು ವಕೀಲರ ನಡುವೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಹಾಗೂ ಪದಾಧಿಕಾರಿಗಳು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ದೂರು ನೀಡಿದ್ದಾರೆ.
ದೂರು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ನ್ಯಾಯಾಲಯ ಆವರಣದಲ್ಲಿ ವಕೀಲರಲ್ಲದ ಕೆಲವರರನ್ನ ಗುಂಪು ಗುಂಪಾಗಿ ಕರೆಸಿದ ಜಗದೀಶ್, ಪ್ರಚೋದನೆ ನೀಡಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದ್ದಾರೆ. ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ಗೌರವ ನೀಡದೇ ದುರ್ವರ್ತನೆ ತೋರಿದ್ದಾರೆ. ಅವರು ಇತ್ತೀಚೆಗೆ ವಕೀಲರಾಗಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ವಕೀಲನ ಈ ದುರ್ವರ್ತನೆ ಖಂಡನೀಯ. ಕಕ್ಷಿದಾರರ ಪರ ವಕೀಲ ಸುಧನ್ವ ಮತ್ತು ನಾರಾಯಣ ಸ್ವಾಮಿ ಅನ್ನುವ ವಕೀಲರಿಗೂ ಜೀವ ಬೆದರಿಕೆ ಒಡ್ಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಕೀಲರ ವೃತ್ತಿ ಗೌರವಕ್ಕೆ ಚ್ಯುತಿ ತರುವಂತಹ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹೀಗಾಗಿ ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿಲಾಗಿದೆ ಎಂದು ವಿವೇಕ್ ರೆಡ್ಡಿ ಹೇಳಿದ್ದಾರೆ.
PublicNext
12/02/2022 10:49 pm