ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧ ನಡೆಸಿದ್ದ 8 ಜನರ ಬಂಧನ

ಚಿಕ್ಕಬಳ್ಳಾಪುರ: ಸರ್ಕಾರಿ‌ ಜಮೀನಿನಲ್ಲಿ ನಿಧಿ ಶೋಧ ನಡೆಸಿದ್ದ ನಿಧಿ‌ಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 8 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಇವರೆಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಯರಕೋಟೆ ಬಳಿಯ ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಅತ್ಯಾಧುನಿಕ ರಾಡರ್ ಯಂತ್ರ, 5 ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶದ ಆಯುರ್ವೇದ ವೈದ್ಯ ಶ್ರೀನಿವಾಸ್, ರಮಣಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೂದಿಗೆರೆಯ ಅನಿಲ್ ಕುಮಾರ್, ಕೃಷ್ಣ, ಚಿಂತಾಮಣಿಯ ಕೆಂಚಾರ್ಲಹಳ್ಳಿ ಗ್ರಾಮದ ಚಾಂದ್ ಪಾಷ, ಜಬೀವುಲ್ಲಾ, ನಂದಿಗಾನಹಳ್ಳಿಯ ಜನಾರ್ಧನ್, ಕೃಷ್ಣಾರೆಡ್ಡಿ ಎಂಬಾತರು ಬಂಧಿತ ಆರೋಪಿಗಳು.

ಎಎಸ್ಐ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಬಟ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

07/02/2022 05:39 pm

Cinque Terre

878

Cinque Terre

0

ಸಂಬಂಧಿತ ಸುದ್ದಿ