ಬೆಂಗಳೂರು: ಬೆಂಗಳೂರಿನಲ್ಲಿ ಮೂಕ ಜೀವಿಗಳ ಜೀವಕ್ಕಿಲ್ವಾ ಬೆಲೆ? ಅನ್ನೋ ಪ್ರಶ್ನೆ ಮತ್ತೆ ಕೇಳಿಕೊಳ್ಳುವಂತ ಸನ್ನಿವೇಶ ಎದುರಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಪ್ರಕರಣ ಕಣ್ಮುಂದೆ ಇರುವಾಗಲೇ ಮತ್ತೊಂದು ಅಂತದ್ದೇ ಪ್ರಕರಣ ಮರುಕಳಿಸಿದೆ. ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಕನಿಷ್ಠ ಕಾರ್ ನಿಲ್ಲಿಸಿ ಪರಿಶೀಲಿಸದೇ ಚಾಲಕನ ಅಮಾನವೀಯತೆ ಮೆರೆದಿದ್ದಾನೆ.ಫೆ.2ರಂದು ಕೂಕ್ ಟೌನ್ ನ ಮೆಕ್ ಫೆರ್ಸನ್ ರಸ್ತೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಸ್ತೆ ಮೇಲಿದ್ದ ನಾಯಿಗೆ ಗುದ್ದಿಕೊಂಡೇ ಸಾಗಿದ ಅಪರಿಚಿತ ಕಾರ್ ರಾತ್ರಿ 9:40ರ ಸುಮಾರಿಗೆ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಕನಿಷ್ಠ ಬ್ರೇಕ್ ಹಿಡಿದಿದ್ರು ಒಂದ ಮೂಕ ಪ್ರಾಣಿಯ ನರಳಾಟ ತಪ್ಪುತ್ತಿತ್ತು. ಆದ್ರೆ ಬ್ರೇಕ್ ಹಾಕದ ಅದೇ ಸ್ಫೀಡ್ ನಲ್ಲಿ ಕಾರನ್ನ ನಾಯಿಯ ಮೇಲೆಹತ್ತಿಸಿದ್ದಾನೆ.
ಸದ್ಯ ಗಾಯಗೊಂಡು ಒದ್ದಾಡುತ್ತಿದ್ದ ನಾಯಿಯನ್ನ ರಕ್ಷಿಸಿರುವ ಸ್ಥಳಿಯರು.
Kshetra Samachara
06/02/2022 01:46 pm