ಬೆಂಗಳೂರು: ರೈಸ್ ಪುಲ್ಲಿಂಗ್ ಎಂಬ ಮೂಡ ನಂಬಿಯ ಚೊಂಬಿಗೆ ಆಸೆ ಬಿದ್ದು ಲಕ್ಷಾಂತರ ಹಣ ಉಂಡೆನಾಮ ಹಾಕಿಸಿಕೊಂಡವರು ಅನೇಕರು. ಸದ್ಯ ವಿಘ್ನೇಶ ಮತ್ತು ನಾರಾಯಣ ಎಂಬಿಬ್ಬರು ಬರೋಬ್ಬರಿ 48 ಲಕ್ಷ ಯಾಮಾರಿಸಿ ಉಂಡೇನಾಮ ಹಾಕಿದವರು.
ಇನ್ನು ಸಾಫ್ಟವೇರ್ ಇಂಜೀನಿಯರ್ ಆಗಿರುವ ನಿತೀನ್ ರಾಜ್ ವೈದ್ಯ ಕಾರ್ತಿಕ್ ಈ ರೈಸ್ ಪುಲ್ಲಿಂಗ್ ದಂಧೆಯಿಂದ ವಂಚನೆಗೊಳಗಾದವರು.
ಅಷ್ಟಕ್ಕೂ ರೈಸ್ ಪುಲ್ಲಿಂಗ್ ಅಂದ್ರೆ ಏನು?
ಸಿಡಿಲು ಬಡಿದ ಚೊಂಬಿನಲ್ಲಿ ಐಸೋಟೋಪಾ ರೇಡಿಯೇಷನ್ ಇರುತ್ತೆ. ಇದು ಬಾಹ್ಯಾಕಾಶ ಸಂಸ್ಥೆಗಳಿಗೆ ಮಾರಾಟ ಮಾಡಿದ್ರೆ ಕೋಟಿಗಟ್ಟಲೆ ಸಂಪಾದನೆ ಮಾಡಬಹುದೆಂದು ನಂಬಿಸಿದ್ದಾರೆ.
ಅಷ್ಟಲ್ಲದೆ ಬಾಹ್ಯಾಕಾಶ ಸಂಸ್ಥೆಗಳಾದ ಅಮೇರಿಕಾದ ನಾಸಾ ಜಪಾನ್ ನ ಆಕ್ಸಾಗೆ ಮಾರಾಟ ಮಾಡ್ತಿವಿ ಎಂದು ಬೊಗಳೆ ಬಿಟ್ಟಿದ್ದಾರೆ.
ಈ ಪ್ರಾಜೆಕ್ಟ್ ಗೆ ಒಂದು ಕೋಟಿ ಹೂಡಿಕೆ ಮಾಡಿದ್ರೆ ಐದು ಕೋಟಿ ರಿಟರ್ನ್ ಬರುತ್ತೆ ಎನ್ನುತ್ತಲೇ ಈ ಇಬ್ಬರೂ ಹಣ ಹೂಡಿಬಿಟ್ಟಿದ್ದರು. ಇನ್ನು ಹಣ ನೀಡಿದ ಮೇಲೆ ಕೇಳಬೇಕಾ.. ವಿಘ್ನೇಶ ಮತ್ತು ನಾರಾಯಣ ಕಣ್ಣರೆಯಾಗಿದ್ದಾರೆ.
ಇತ್ತ ಹಣ ಕಳೆದುಕೊಂಡ ಇಂಜೀನಿಯರ್ ನಿತೀನ್ ರಾಜ್ ವೈದ್ಯ ಕಾರ್ತಿಕ್ ಪೊಲೀಸರನ್ನು ಭೇಟಿಯಾಗಿದ್ದಾರೆ. ಇನ್ನು ಸುದ್ದಿ ತಿಳಿದ ಬ್ಯಾಟರಾಯನ ಪುರ ಇನ್ಸ್ ಪೆಕ್ಟರ್ ಶಂಕರ್ ನಾಯಕ್ ಆ್ಯಂಡ್ ಟೀಂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಸಂತೋಷಗೌಡ ಚೊಂಬಿನೊಂದಿಗೆ ಎಸ್ಕೇಪ್ ಆಗಿದ್ದು ಆತನಿಗಾಗಿ ಬಲೆ ಬೀಸಿದ್ದಾರೆ.
ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
05/02/2022 04:41 pm