ಯಲಹಂಕ : ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಇದೇ ಕಂಪನಿಯ ಹುಡುಗಿಗೆ ಮಸಾಜ್ ಮಾಡಿದನೆಂಬ ಕಾರಣಕ್ಕೆ ಕೊಲೆಗೆ ಸಂಚು ನಡೆಸಿ ಕೊಲೆ ಯತ್ನ ನಡೆಸಿದ ನಾಲ್ವರ ಬಂಧಿಸಿದ ಬಾಗಲೂರು ಪೊಲೀಸರು.
ಯಲಹಂಕ ತಾಲೂಕಿನ ಬಾಗಲೂರು ಕೆ.ಐ.ಎ.ಡಿ.ಬಿ ಪ್ರದೇಶದಲ್ಲಿರುವ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರ (23) ಕೊಲೆ ಯತ್ನಗೆ ಒಳಗಾದ ಯುವಕ. ಹುಡುಗಿಗೆ ಮಸಾಜ್ ಮಾಡಿದನೆಂಬ ಕಾರಣಕ್ಕೆ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಜನವರಿ 31 ರಂದು ಚಾಕುವಿನಿಂದ ಚುಚ್ಚಿ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದದ್ದರು, ಕೊಲೆ ಯತ್ನ ಪ್ರಕಾರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬೆನ್ನತ್ತಿದ್ದರು.
ಘಟನೆಯಾದ ಮೂರೇ ದಿನದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ, ಮೋಹನ್ (21), ಕಾಕೇಶ್ (20) , ವರುಣ್ ಕುಮಾರ್ (21), ಸೂರಜ್ (20) ಬಂಧಿತ ಆರೋಪಿಗಳಾಗಿದ್ದಾರೆ, ಕೃತ್ಯಕ್ಕೆ ಬಳಸಿದ ಒಂದು ಚಾಕು ಮತ್ತು ಎರಡು ಬೈಕ್ ವಶ ಪಡಿಸಿಕೊಳ್ಳಲಾಗಿದೆ.
Kshetra Samachara
05/02/2022 09:50 am