ಆನೇಕಲ್: ಅಂಗನವಾಡಿಗೆ ಮಂಜೂರಾದ ಜಾಗವನ್ನು ಪ್ರಭಾವಿ ನಾಯಕನೊಬ್ಬ ಕಬಳಿಕೆ ಮಾಡಲು ಹುನ್ನಾರ ನಡೆಸಿರುವ ಘಟನೆ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ. ಮುತ್ತಾನಲ್ಲೂರು ಮೂಲದ ರಾಮಚಂದ್ರಾರೆಡ್ಡಿ ಎಂಬುವವರೇ ಭೂ ಕಬಳಿಕೆ ಮಾಡಲು ಮುಂದಾಗಿದ್ದ ಪ್ರಭಾವಿ ನಾಯಕ ಅರೋಪ ಕೇಳಿ ಬಂದಿದೆ.
ಇನ್ನು ಕುವೆಂಪುನಗರದ ಗ್ರಾಮ ಪಂಚಾಯಿತಿಯ ಸದಸ್ಯರು ಸುರೇಶ್ ಹಾಗೂ ಗ್ರಾಮಸ್ಥರು ಅಂಗನವಾಡಿ ಜಾಗವನ್ನು ಬಿಟ್ಟುಕೊಡುವಂತೆ ಅಧ್ಯಕ್ಷರಿಗೆ ಪಟ್ಟು ಹಿಡಿದಿದ್ದಾರೆ.
2005ರಲ್ಲಿ ಅಂಗನವಾಡಿಗೆ ಸಮಂದೂರು ಗ್ರಾಮ ಪಂಚಾಯಿತಿಯಿಂದ ಮಂಜೂರಾಗಿತ್ತು ಅಂಗನವಾಡಿ ಪಕ್ಕದ ಜಾಗ ಜಯಮ್ಮ ಎಂಬವರಿಗೆ ಆಶ್ರಯ ಯೋಜನೆಅಡಿಯಲ್ಲಿ ಹಕ್ಕು ಬಿಡುಗಡೆ ಪತ್ರವನ್ನು ನೀಡಲಾಯಿತು ಆ ಜಾಗವನ್ನ ಜಯಮ್ಮನವರು ರಾಮಚಂದ್ರ ರೆಡ್ಡಿಯವರಿಗೆ ಮಾರಾಟ ಮಾಡಿದರು, ಅಂಗನವಾಡಿಗೆ ಸೇರಿದ ಜಾಗವನ್ನು ಕೂಡ ಬಿಟ್ಟುಕೊಡುವಂತೆ ರಾಮಚಂದ್ರಾರೆಡ್ಡಿ ಅವರು ಧಮಕಿ ಹಾಕುತ್ತಿದ್ದರೆ ಆರೋಪ ಕೇಳಿಬಂದಿದೆ.. ಇನ್ನು ಇದಕ್ಕೆ ಸಮಂದೂರು ಗ್ರಾಮ ಪಂಚಾಯಿತಿ ಪಿಡಿಓ ಸುಬನ್ ಖಾನ್ ಹಾಗೂ ಅಧ್ಯಕ್ಷರು ಕೋದಂಡ ಶಾಮೀಲು ಆಗಿದ್ದರಂತೆ ಆರೋಪ ಸಹ ಕೇಳಿಬಂದಿದೆ.
Kshetra Samachara
04/02/2022 06:39 pm