ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಕಲಬೆರಕೆ ಚಿನ್ನ ಮಾರಾಟ ಗ್ಯಾಂಗ್ ಪತ್ತೆ:ಆರೋಪಿಗಳನ್ನ ಬಂಧಿಸಿದ ಸಿಸಿಬಿ

ಬೆಂಗಳೂರು: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಯಾಕಂದ್ರೆ ಚಿನ್ನ ಅನ್ನೋದು ಒಂದು ರೀತಿ ಆಭರಣಕ್ಕಿಂತ ಹೆಚ್ಚು ಉಳಿತಾಯದ ಮೂಲವೇ ಆಗಿದೆ.ಕಷ್ಟಪಟ್ಟು ದುಡಿದು ಉಳಿಸಿದ್ದ ಹಣದಲ್ಲಿ ಸಾಮಾನ್ಯ ಜನರು ಬಂಗಾರ ಖರೀದಿ ಮಾಡ್ತಾರೆ. ಆದರೆ, ನೀವು ಖರೀದಿ ಮಾಡಿರೋ ಬಂಗಾರವೆ ಕಲಬೆರಕೆ ಆಗಿರೋ ಸಾಧ್ಯತೆಯಿದೆ.

ಹೌದು. ಇಲ್ಲಿ ಇರೊ ಅಷ್ಟೂ ಚಿನ್ನದ ಬಿಸ್ಕತ್ತುಗಳು ಕಲಬೆರಕೆ ಬಿಸ್ಕತ್ತುಗಳೇ ಆಗಿವೆ. ಬೆಂಗಳೂರಿನಲ್ಲಿ ಕಲಬೆರಕೆ ಚಿನ್ನ ಮಾರಾಟದ ಜಾಲ ಬೆಳಕಿಗೆ ಬಂದಿದೆ. ಹಲಸೂರು ಗೇಟ್ ಬಳಿಯ ನಗರತ್ ಪೇಟೆಯಲ್ಲಿ ಚಿನ್ನವನ್ನು ಕಲಬೆರಕೆ ಮಾಡಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅನ್ನು ಸಿಸಿಬಿ ಅರೆಸ್ಟ್ ಮಾಡಿದೆ.

ರಾಜೇಶ್ ಹೆಚ್ ಭೋಸ್ಲೆ, ಅಜಯ್ ,ಕಾಂತಿಲಾಲ್ ಮತ್ತು ಹೃತ್ವಿಕ್ ಆರೋಪಿಗಳಾಗಿದ್ದು, ಹೋಲ್ ಸೇಲ್ ದರದಲ್ಲಿ ಚಿನ್ನದ ಗಟ್ಟಿಗಳನ್ನು ಸಾರ್ವಜನಿಕರಿಗೆ ಹಾಗೂ ಚಿನ್ನದ ಅಂಗಡಿಗಳಿಗೆ ಬೆಂಗಳೂರು ಮತ್ತು ರಾಜ್ಯಾದ್ಯಂತ ಮಾರಾಟ ಮಾಡ್ತಿದ್ರು. ಮೊದಲಿಗೆ ಬೇರೆಡೆಯಿಂದ ಒರಿಜಿನಲ್ ಚಿನ್ನದ ಗಟ್ಟಿಗಳನ್ನು ಖರೀದಿ ಮಾಡ್ತಿದ್ದ ಆರೋಪಿಗಳು, ನಂತ್ರ ಅದಕ್ಕೆ ಅಸ್ಮೀಯಮ್ ಸ್ಪಾಂಜ್ ಎಂಬ ಕೆಮಿಕಲ್ ಅನ್ನು 10% ಬೆರಸುತಿದ್ರು. ಅಲ್ಲಿಗೆ ಚಿನ್ನದಲ್ಲಿ 90% ಪ್ಯೂರಿಟಿ ಇರುತ್ತೆ. ಉಳಿದ ಹತ್ತು ಪರ್ಸೆಂಟ್ ಕಲಬೆರಕೆ ಆಗಿ ಬಿಡುತ್ತದೆ. ಈ ಕಲಬೆರಕೆ ಚಿನ್ನವನ್ನು 99.9% ಗುಣಮಟ್ಟದ 999 ಗೋಲ್ಡ್ ಎಂದು ಮಾರಾಟ ಮಾಡ್ತಿದ್ರು.

ಕಳೆದ ಆರು ತಿಂಗಳಿಂದ ಈ ಆರೋಪಿಗಳು ಈ ವ್ಯವಹಾರ ನಡೆಸುತಿದ್ದು ನಿತ್ಯ ಕನಿಷ್ಠ ನಾಲ್ಕು ಕೆ.ಜಿ ಯಂತೆ ಸುಮಾರು ನಾಲ್ಕು ನೂರು ಕೆ.ಜಿ ಚಿನ್ನವನ್ನು ಕಲಬೆರಕೆ ಮಾಡಿ ಮಾರಾಟ ಮಾಡಿದ್ದಾರೆಂದು ಮಾಹಿತಿ ಸಿಕ್ಕಿದೆ.

Edited By : Manjunath H D
PublicNext

PublicNext

04/02/2022 12:39 pm

Cinque Terre

29.05 K

Cinque Terre

0

ಸಂಬಂಧಿತ ಸುದ್ದಿ