ಬೆಂಗಳೂರು: ಬೆಂಗಳೂರು ಪೊಲೀಸ್ರು ಕಳೆದ ಕೆಲ ವರ್ಷಗಳಿಂದ ಡ್ರಗ್ಸ್ ಮೇಲೆ ಸಮರಸಾರಿದ್ದಾರೆ ಎಂದೇ ಹೇಳಬಹುದು.ಆ ಮಟ್ಟಿಗೆ ಡ್ರಗ್ ಪೆಡ್ಲರ್ ಗಳ ಹೆಡೆ ಮುರಿ ಕಟ್ಟುತ್ತಿದ್ದಾರೆ. ಅದ್ರಲ್ಲೂ ಉತ್ತರ ವಿಭಾಗದ ಗೋವಿಂದಪುರ ಪೊಲೀಸ್ರು ಕಳೆದೊಂದು ವರ್ಷದಿಂದ ಹೈ ಫೈ ಡ್ರಗ್ ಪೆಡ್ಲರ್ ಗಳನ್ನ ಅರೆಸ್ಟ್ ಮಾಡಿದ್ದಾರೆ. ಇನ್ನೂ ಅವರ ಹತ್ರ ಸೀಜ್ ಮಾಡಿರೋ ಡ್ರಗ್ ಬೆಲೆ ಕೇಳಿದ್ರೆ ಗಾಬರಿಯಾಗುತ್ತೆ.
Yes ಎಸ್ ಗೋವಿಂದಪುರ ಇನ್ಸ್ಪೆಕ್ಟರ್ ಪ್ರಕಾಶ್ ಅಂಡ್ ಟೀಂ ಇವತ್ತು ಬರೋಬ್ಬರಿ ಮೂರು ಕೋಟಿ ಮೌಲ್ಯದ ಡ್ರಗ್ಸ್ ನ ಸೀಜ್ ಮಾಡಿದೆ. ಇವ್ರ ಕೆಲಸಕ್ಕೆ ಕಮಿಷನರ್ ಕೂಡ ಪ್ರಶಂಸಿಸಿ 70 ಸಾವಿರ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಆತಂಕದ ವಿಚಾರ ಅಂದ್ರೆ ನಗರಕ್ಕೆ ಹೊಸ ಹೊಸ ಮಾದರಿಯ ದುಬಾರಿ ಡ್ರಗ್ಸ್ ಸಪ್ಲೈ ಆಗ್ತಿರೋದು.ಹೌದು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಬ್ಲಾಕ್ ಎಂಡಿಎಂಎ ಡ್ರಗ್ ಪತ್ತೆಯಾಗಿದ್ದು,ವಿದೇಶಗಳಲ್ಲಿ ಕಂಡು ಬರ್ತಿದ್ದ ಬ್ಲಾಕ್ ಎಂಡಿಎಂಎ ಸಿಲಿಕಾನ್ ಸಿಟಿಗೂ ಎಂಟ್ರಿ ಕೊಟ್ಟಿದೆ ಅನ್ನೋದು ನಿಜಕ್ಕೂ ಆತಂಕದ ವಿಚಾರ.
ಇನ್ನೂ ವರ್ಲ್ಡ್ ನಲ್ಲೇ ಟಾಪ್ ಎಂಡ್ ಡ್ರಗ್‌ಗಳಲ್ಲಿ ಬ್ಲಾಕ್ ಎಂಡಿಎಂಎ ಕೂಡ ಒಂದಾಗಿದ್ದು.ಕೆಲವು ಹೊಟೇಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಈ ಡ್ರಗ್ ಸಪ್ಲೈ ಮಾಡ್ತಿದ್ದ ನೈಜೀರಿಯಾ ಮೂಲದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 3 ಕೋಟಿ ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್ , 120 ಗ್ರಾಂ ಬ್ಲಾಕ್ ಎಂ ಡಿ ಎಂ ಎ , 16.5 ಕೆಜಿ ಎಂಡಿಎಂಎ ಮಿಕ್ಸ್ಡ್ ವೀಡ್ ಆಯಿಲ್ , 300 ಗ್ರಾಂ ವೀಡ್ ಆಯಿಲ್ ಸೀಜ್ ಮಾಡಿ ವಿಚಾರಣೆ ನಡೆಸ್ತಿದ್ದಾರೆ.
PublicNext
29/01/2022 09:34 pm