ಬೆಂಗಳೂರು: ಬಿಎಸ್ ವೈ ಪುತ್ರಿ ಪದ್ಮಾವತಿ ಮಗಳು ಡಾ. ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ವೈದ್ಯ ಪತಿ ನೀರಜ್ ಮತ್ತು ಸೌಂದರ್ಯ ಮನಸ್ತಾಪವೇ ಕಾರಣ ಅಂತಲೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪಕ್ಕದ ಮನೆಯ ಖ್ವಾಜಾ ಹುಸೇನ್ ಒಂದಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಡಾಕ್ಟರ್ ಸೌಂದರ್ಯ ಮತ್ತು ಡಾಕ್ಟರ್ ನೀರಜ್ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ. ನಾ ಕಂಡಂತೆ ಯಾವುದೇ ಜಗಳವೂ ಆಗಿರಲಿಲ್ಲ. ಎರಡು ವರ್ಷದಿಂದ ಇವರು ಇಲ್ಲಿಯೇ ವಾಸವಾಗಿದ್ದಾರೆ. ಇವರಿಗೆ 9 ತಿಂಗಳ ಗಂಡು ಮಗು ಕೂಡ ಇದೆ ಎಂದು ನೆರಮನೆಯ ಖ್ವಾಜಾ ಹುಸೇನ್ ಹೇಳಿಕೊಂಡಿದ್ದಾರೆ.
ಮನೆಗೆಲಸದವರು ಬಂದು ನೋಡಿದಾಗಲೇ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗಿದೆ. ಬೆಳಗ್ಗೆ 10.30 ಕ್ಕೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ.
ಈ ವೇಳೆಗಾಗಲೇ ಸೌಂದರ್ಯ ಪತಿ ನೀರಜ್ ಕೆಲಸಕ್ಕೆ ಹೋಗಿದ್ದರು. ಘಟನೆ ಬಳಿಕ ಸೌಂದರ್ಯ ತಾಯಿ,ಅಣ್ಣ ಮತ್ತು ಕುಟುಂಬಸ್ಥರು ಬಂದರು. ಮೃತ ದೇಹವನ್ನ ತೆಗೆದುಕೊಂಡು ಹೋದರು ಅಂತಲೇ ಖ್ವಜಾ ಹುಸೇನ್ ವಿವರಿಸಿದ್ದಾರೆ.
Kshetra Samachara
28/01/2022 04:09 pm