ದೊಡ್ಡಬಳ್ಳಾಪುರ: ರೈಲು ಹಳಿ ದಾಟಲು ಸ್ಕೈ ವಾಕ್ ಬಳಸದೆ ನೇರವಾಗಿ ಹಳಿ ದಾಟಲು ಮುಂದಾಗಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.
ದೊಡ್ಡಬಳ್ಳಾಪುರ ನಗರ ಹೊರವಲಯ ರೈಲ್ವೆ ಸ್ಟೇಷನ್‌ನಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಹಿಂದೂಪುರಕ್ಕೆ ಹೋಗಲು ಬಂದಿದ್ದ ವೃದ್ಧೆ ರೈಲ್ವೆ ಸ್ಟೇಷನ್‌ನಲ್ಲಿನ ಸ್ಕೈವಾಕ್ ಬಳಸದೆ ನೇರವಾಗಿ ರೈಲು ಹಳಿ ದಾಟಲು ಮುಂದಾದಾಗ ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಸುಮಾರು 70 ವರ್ಷದ ವೃದ್ಧೆಯ ಗುರುತು ಪತ್ತೆಯಾಗಿಲ್ಲ. ಮೃತ ಮಹಿಳೆಯ ಕುಟುಂಬಸ್ಥರು, ಸಂಬಂಧಿಕರು ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.
Kshetra Samachara
28/01/2022 10:00 am