ಬೆಂಗಳೂರು: ಬ್ಲಾಕ್‌ಮೇಲ್ ಭೂತಕ್ಕೆ ಹೆದರಿ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಒಂದು ತಿಂಗಳ ಹಿಂದಷ್ಟೇ ಬ್ಲಾಕ್ ಮೇಲ್‌ಗೆ ಹೆದರಿ ವೈದ್ಯರೊಬ್ಬರು ಇದೇ ರೀತಿ ಕೆಂಗೇರಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು.
ಆ ಘಟನೆ ಮಾಸುವ ಮುನ್ನವೇ ಸೈಬರ್ ಚೋರರ ಬ್ಲಾಕ್ ಮೇಲ್‌ಗೆ ಇಂಜಿನಿಯರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವತಿ ಸೋಗಿನಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಇಂಜಿನಿಯರ್‌ನನ್ನು ಸೈಬರ್ ವಂಚಕರು ಪರಿಚಯ ಮಾಡಿಕೊಂಡಿದ್ದರು. ಯುವತಿಯ ರೀತಿಯಲ್ಲಿ ಮಾತನಾಡಿ ಬೆತ್ತಲಾಗುವಂತೆ ಉತ್ತೇಜನ ನೀಡಿದ್ದ ವಂಚಕರು. ವಿಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಪ್ರೇರೇಪಿಸಿದ್ದಾರೆ. ನಂತರ ಅದರ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮರ್ಯಾದೆಗೆ ಅಂಜಿದ ಇಂಜಿನಿಯರ್ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಲ್ಲೇಶ್ವರಂನ ರೈಲ್ವೆ ಹಳಿಯಲ್ಲಿ ಇಂಜಿನಿಯರ್ ಶವ ಪತ್ತೆಯಾಗಿದೆ.
PublicNext
26/01/2022 03:58 pm