ಬೆಂಗಳೂರು: ಚಿನ್ನ ಮಾರಾಟ ಮಾಡುವ ನೆಪದಲ್ಲಿ ಚಿನ್ನದ ವ್ಯಾಪಾರಿಯನ್ನು ಕರೆಸಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿಗಳನ್ನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ನಂತರ ಯಾರಿಗೂ ಅನುಮಾನ ಬಾರದಿರಲಿ ಅಂತ ಚೀಲದಲ್ಲಿ ಬಾಡಿ ಪ್ಯಾಕ್ ಮಾಡಿ ಮಾಗಡಿ ಬಳಿಯ ಕೆರೆಯಲ್ಲಿ ಬಿಸಾಕಿ ಪರಾರಿಯಾಗಿದ್ರು.
ಇನ್ನು ಹೀಗೆ ಕೊಲೆಯಾಗಿ ಗೋಣಿ ಚೀಲದಲ್ಲಿ ತುಂಬಿ ಕೆರೆಗೆ ಎಸೆಯಲಾಗಿದ್ದ ಈ ನತದೃಷ್ಟನ ಹೆಸರು ದಿವಾಕರ್. ಈತ ಬನಶಂಕರಿಯ ಸರೆಬಂಡೆಪಾಳ್ಯ ನಿವಾಸಿ. ಕಳೆದ ಕೆಲ ವರ್ಷಗಳಿಂದ ಎಸ್ಎಸ್ಆರ್ ಗೋಲ್ಡ್ ಕಂಪೆನಿಯಲ್ಲಿ ದಿವಾಕರ್ ಕೆಲಸ ಮಾಡುತ್ತಿದ್ದ. ಜನರಿಂದ ಚಿನ್ನ ಪಡೆದು ಹಣ ನೀಡುವ ವ್ಯವಹಾರ ಮಾಡುತ್ತಿದ್ದ. ಕಳೆದ ವಾರ ಸುಂಕದಕಟ್ಟೆಯ ಮಂಜುನಾಥ್ ಚಿನ್ನ ಮಾರಾಟ ಮಾಡುವ ಪ್ಲಾನ್ ಮಾಡಿ ದಿವಾಕರ್‌ನನ್ನ ಸುಂಕದಕಟ್ಟೆಗೆ ಕರೆಸಿಕೊಂಡಿದ್ದ. ಜೊತೆಗೆ ಸ್ನೇಹಿತ ಮುನಿರಾಜ್‌ನ ಕರೆಸಿಕೊಂಡು ದಿವಾಕರ್ ಮೇಲೆ ಹಲ್ಲೆ ನಡೆಸಿ ಹಣ ಲೂಟ್ ಮಾಡುವ ಪ್ಲಾನ್ ಮಾಡಿದ್ರು. ಅದರಂತೆ ಮಂಜ ದಿವಾಕರ್‌ನ ಮನೆಗೆ ಚಿನ್ನ ಕೊಡ್ತೀವಿ ಅಂತ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆ ನಂತರ ಶವವನ್ನು ಚೀಲದಲ್ಲಿ ಪ್ಯಾಕ್ ಮಾಡಿ ಟೂ ವೀಲರ್ ನಲ್ಲಿ ತೆಗೆದುಕೊಂಡು ಮಾಗಡಿ ಬಳಿಯ ಹೊನ್ನಾಪುರ ಕೆರೆಗೆ ಎಸೆದು ಪರಾರಿಯಾಗಿದ್ದರು.
ಇನ್ನು ಸಾಕ್ಷಿ ಸಿಗದೇ ಇರಲಿ ಅಂತ ದಿವಾಕರ್‌ನ ಬೈಕ್ ಕೂಡ ಕೆರೆಯಲ್ಲಿ ಮುಳುಗಿಸಿ ಸಾಕ್ಷ್ಯ ನಾಶಪಡಿಸಿದ್ದಾರೆ. ಮತ್ತೊಂದೆಡೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಿವಾಕರ್ ನಾಪತ್ತೆಯಾಗಿರುವುದಾಗಿ ಮನೆಯವರು ದೂರು ನೀಡಿದ್ದರು. ಸದ್ಯ ಪುಟ್ಟೇನಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
PublicNext
26/01/2022 02:28 pm