ಬೆಂಗಳೂರು: ಮನುಷ್ಯರು ಕಳೆದೋದ್ರೆ ಹುಡುಕೋದು ಕಷ್ಟ. ಅಂತದ್ರಲ್ಲಿ, ಪ್ರಾಣಿಗಳು ಕಳೆದೋದ್ರೆ ಹೇಗೆ ಹುಡುಕೋದು? ಇಷ್ಟು ದಿನ ಕಾಸ್ಟ್ಲಿ ನಾಯಿಗಳು ಕಳೆದೋದ್ರೆ ಪೊಲೀಸ್ ಠಾಣೆ ಮೆಟ್ಟಿಲೇರಿ ʼನಾಯಿ ಹುಡುಕಿ ಕೊಡಿʼ ಅಂತ ದೂರು ಕೊಟ್ಟವರನ್ನು ನಾವೆಲ್ಲ ನೋಡಿರ್ತೇವೆ. ಆದ್ರೆ ಇಲ್ಲೊಬ್ಬ ಮಹಾಶಯ, ʼಬೆಕ್ಕು ಕಳೆದೋಗಿದೆ, ಹುಡುಕಿ ಕೊಡಿʼ ಅಂತ ತಿಲಕ್ ನಗರ ಠಾಣೆಗೆ ದೂರು ನೀಡಿದ್ದಾರೆ!
ಠಾಣೆಯಲ್ಲಿ ʼಬೆಕ್ಕು ಮಿಸ್ಸಿಂಗ್ʼ ಕುರಿತು ಎಫ್ ಐಆರ್ ಕೂಡ ದಾಖಲಾಗಿದೆ. ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬವರು ದೂರು ನೀಡಿದ್ದು, ಪ್ರೀತಿಯಿಂದ ಸಾಕಿದ ವಿದೇಶಿ ಬೆಕ್ಕು ಇದಾಗಿದ್ದು, ಜ.15ರಂದು ನಾಪತ್ತೆಯಾಗಿದೆ ಎಂದು ದೂರು ಕೊಟ್ಟಿದ್ದಾರೆ.
ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ಅನುಮಾನಿಸಿರೋ ಮಿಸ್ಬಾ, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ರೂ. ಬಹುಮಾನ ಕೊಡುವುದಾಗಿಯೂ ಘೋಷಣೆ ಮಾಡಿದ್ದಾರೆ! ಮನೆಯಲ್ಲಿ ಮೊಲವನ್ನೂ ಸಾಕಿರುವ ಮಿಸ್ಬಾ ಶರೀಫ್, ಮೊಲದ ಜೊತೆ ತುಂಬಾ ಆತ್ಮೀಯವಾಗಿರುವ ವೀಡಿಯೊ ಕೂಡ ʼಪಬ್ಲಿಕ್ ನೆಕ್ಸ್ಟ್ʼ ಗೆ ಲಭ್ಯ ವಾಗಿದೆ.
PublicNext
23/01/2022 03:31 pm