ಬೆಂಗಳೂರು: ಆತ ರೋಡ್ ರೋಮಿಯೊ. ಆತನ ಬಣ್ಣದ ಮಾತಿಗೆ ಮರುಳಾದ ಯುವತಿಯೊಬ್ಬಳು ಆತನ ಲವ್ ಪ್ರಪೋಸಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಳು. ಬಳಿಕ ಮದುವೆಯಾಗೋದಾಗಿ ನಂಬಿಸಿ, ಲಿವಿಂಗ್ ಟುಗೆದರ್ ಇಟ್ಕೊಂಡು ಆಕೆ ಬಳಿ ಲಕ್ಷ ಲಕ್ಷ ಹಣ ಕಿತ್ತಿದ್ದು ಅಲ್ಲದೆ, ಗರ್ಭಿಣಿ ಮಾಡಿ 2 ತಿಂಗಳ ಹಿಂದೆ ಕೈಕೊಟ್ಟು ಎಸ್ಕೇಪ್ ಆಗಿದ್ದ ʼಮೋಸಗಾರʼ ಈಗ ಪೊಲೀಸರ ಅತಿಥಿ.
ಎಸ್, ಈಕೆ 25ರ ಹರೆಯದ ಯುವತಿ. ಬೆಂಗಳೂರಿಗೆ ಬಂದು ಈವೆಂಟ್ ಮ್ಯಾನೇಜ್ಮೆಂಟ್ ಮಾಡಿಕೊಂಡಿದ್ಳು. ಈಕೆ ಸ್ನೇಹಿತೆಯ ಸಹೋದರನೇ ಈ ರೋಡ್ ರೋಮಿಯೊ ಅರುಣ್. ಯುವತಿಯನ್ನು ನಂಬಿಸಿ, ಆಕೆ ಗರ್ಭಿಣಿ ಅಂತ ಗೊತ್ತಾದಾಗ ಎಸ್ಕೇಪ್ ಆಗಿದ್ದ ಕೀಚಕ. ಇವರಿಬ್ಬರು 5 ತಿಂಗಳವರೆಗೂ ಲಿವಿಂಗ್ ಟುಗೆದರ್ ನಲ್ಲಿದ್ದರು.
ಈ ಮಧ್ಯೆ ಆಕೆ ಬಳಿ ಆಗಾಗ 4 ಲಕ್ಷದ ವರೆಗೆ ಹಣ ಪೀಕಿದ್ನಂತೆ. ಅಲ್ಲದೆ, ನಂಬಿಸಿ ಗರ್ಭಿಣಿ ಮಾಡಿದ್ದಾನೆ. ಮಗುವನ್ನು ತೆಗೆಸಿಬಿಡು, ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಮದುವೆಯೂ ಆಗುವುದಿಲ್ಲ. ನೀನು ಏನು ಮಾಡುತ್ತೀಯೋ ಮಾಡಿಕೋ ಅಂತ ನಂತರ ಕೈಕೊಟ್ಟು ಪರಾರಿ ಆಗಿದ್ದಾನೆ. ತಾನು ಮೋಸ ಹೋದೆ ಎಂದು ಗೊತ್ತಾದ ಕೂಡಲೇ ಯುವತಿ, ಕಳೆದೆರೆಡು ತಿಂಗಳ ಹಿಂದೆ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು, ಕೀಚಕ ಅರುಣ್ ನನ್ನು ಇದೀಗ ಬಂಧಿಸಿ, ಜೈಲಿಗಟ್ಟಿದ್ದಾರೆ.
PublicNext
23/01/2022 08:31 am