ಬೆಂಗಳೂರು: ಆತನಿಗೆ ಆದಾಗ್ಲೆ 2 ಮದುವೆಯಾಗಿತ್ತು. 2ನೇ ಹೆಂಡತಿ ಜೊತೆ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದ. 2ನೇ ಹೆಂಡತಿ ಜೊತೆ ಸುಮ್ಮನೆ ಸಂಸಾರ ನಡೆಸ್ತಿದ್ರೆ ಇವತ್ತು ಆತ ಸುದ್ದಿ ಆಗ್ತಿರ್ಲಿಲ್ಲ. ಸಾಲದ್ದಕ್ಕೆ ಎದುರು ಮನೆಯಲ್ಲಿದ್ದ ವಿಚ್ಛೇದಿತ ಮಹಿಳೆ ಜೊತೆಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ. ಇವ್ರ ಪ್ರೇಮ ಪ್ರಸಂಗ ಮನೆಯವರಿಗೂ ಗೊತ್ತಾಗಿ, ಗಲಾಟೆ ಕೂಡ ನಡೆದಿತ್ತು. ನಂತರ ಇಬ್ಬರ ಹೆಂಡಿರ ಗಂಡ ಶ್ರೀನಿವಾಸ @ ಬೊಟ್ಟು ಸೀನಾ 3ನೇ ಪ್ರೇಯಸಿಗಾಗಿ ಬೇರೆ ಮನೆ ಮಾಡಿದ್ದ.
2 ತಿಂಗಳ ನಂತರ ಈ 3ನೇ ಪ್ರೇಮವೂ ಹಳಸಿ ಬೊಟ್ಟು ಸೀನನ ಬಿಟ್ಟು ಮಹಿಳೆ ಮತ್ತೆ ತವರು ಸೇರಿದ್ಳು. ಇದ್ರಿಂದ ಕುಪಿತನಾಗಿದ್ದ ಸೀನಾ ಪದೇ ಪದೇ ಮಹಿಳೆ ಅಣ್ಣ ವೆಂಕಟೇಶ್ ನಿಗೆ ಕಾಲ್ ಮಾಡಿ ತಂಗಿ ಕಳುಹಿಸುವಂತೆ ಟಾರ್ಚರ್ ಮಾಡ್ತಿದ್ದ. ಇದಕ್ಕೆ ವೆಂಕಟೇಶ್ ಒಪ್ಪದಿದ್ದಾಗ ವೆಂಕಟೇಶ್ ನನ್ನು ಕಿಡ್ನ್ಯಾಪ್ ಮಾಡಲು ಪ್ಲಾನ್ ಮಾಡಿದ್ದ ಸೀನಾ. ಇದಕ್ಕಾಗಿ ರೌಡಿ ಶೀಟರ್ ಆಕಾಶ್ ಜೊತೆ ಸೇರಿ ಬಸ್ ಡ್ರೈವರ್ ವೆಂಕಟೇಶ್ ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ರು.
ಸೀನಾ, ವೆಂಕಟೇಶನಿಗೆ ಹಲ್ಲೆ ನಡೆಸಿ ಆತನ ತಂಗಿಗೆ ವೀಡಿಯೊ ಕಾಲ್ ಮಾಡಿ ಬೆದರಿಕೆ ಹಾಕಿದ್ದ. ನೀನು ಬರದಿದ್ರೆ ಇವನನ್ನು ಮುಗಿಸೋದಾಗಿ ಧಮ್ಕಿ ಹಾಕಿದ್ದ. ಈ ಕುರಿತು ಮಹಿಳೆ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗ್ತಿದ್ದಂತೆ ಇನ್ಸ್ಪೆಕ್ಟರ್ ರವಿ ಕುಮಾರ್ ಸಬ್ ಇನ್ಸ್ಪೆಕ್ಟರ್ ನವೀನ್ ಪ್ರಸಾದ್ ಜೊತೆಗೆ ಕ್ರೈಂ ತಂಡ ರಚಿಸಿ, ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ತಾರೆ. ಸದ್ಯ ಸೀನಾ, ಆಕಾಶ್, ಶಿವಕುಮಾರ್, ಗಂಗಾಧರ ಸೇರಿ 7 ಆರೋಪಿಗಳನ್ನು ಬಂಧಿಸಿ ಕಿಡ್ನ್ಯಾಪ್ ಆಗಿದ್ದ ವೆಂಕಟೇಶ್ ನನ್ನು ರಕ್ಷಿಸಿದ್ದಾರೆ.
PublicNext
22/01/2022 04:02 pm