ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: TNPL ಕ್ರಿಕೆಟಿಗರಿಗೆ ಫಿಕ್ಸಿಂಗ್ ಆಫರ್; ಆರೋಪಿ ಅಂದರ್

ಬೆಂಗಳೂರು: ಇನ್ ಸ್ಟಾಗ್ರಾಮ್ ನಲ್ಲಿ ಮೆಸೇಜ್ ಹಾಕಿ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ತಮಿಳುನಾಡು ಪ್ರೀಮಿಯರ್ ಲೀಗ್ ತಂಡದ ಐವರು ಕ್ರಿಕೆಟಿಗರಿಗೆ ಆಫರ್ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ‌. ತೀವ್ರ ಸಂಚಲನ ಮೂಡಿಸಿದ್ದ ಫಿಕ್ಸಿಂಗ್ ಪ್ರಕರಣವನ್ನು ಇನ್‌ ಸ್ಪೆಕ್ಟರ್ ಮಂಜುನಾಥ್ ಮತ್ತವರ ತಂಡ ಟ್ರೇಸ್ ಮಾಡಿದೆ.‌

ತಮಿಳುನಾಡಿನ ಖ್ಯಾತ ಆಲ್ರೌಂಡರ್ ಸತೀಶ್ ರಾಜಗೋಪಾಲ್ ಗೆ ಜ.3ರಂದು ಇನ್ ಸ್ಟ್ರಾಗ್ರಾಮ್ ಗೆ ಮೆಸೇಜ್ ಬಂದಿತ್ತು. ಮುಂದಿನ TNPL ನಲ್ಲಿ ಫಿಕ್ಸಿಂಗ್ ನಲ್ಲಿ‌ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್ ಗೆ ಒಪ್ಪಿದ್ದಾರೆ. ನೀವೂ ಭಾಗಿಯಾದರೆ ಪ್ರತಿ ಪಂದ್ಯಕ್ಕೆ 40 ಲಕ್ಷ ರೂ. ನೀಡುವುದಾಗಿ ಆಫರ್ ನೀಡಲಾಗಿತ್ತು. ಇದೇ ಮೆಸೇಜ್ ಇತರ ತಮಿಳುನಾಡು ಆಟಗಾರರಾದ ಆ್ಯಂಟೋನಿ ದಾಸ್, ಸಂಜಯ್ ಯಾದವ್, ಅಶ್ವಿನ್ ಕ್ರಿಸ್ಟ್, ಎಂ. ಸಿದ್ಧಾರ್ಥ್ ಎಂಬವರಿಗೂ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಸಂದೇಶ ಕಳುಹಿಸಲಾಗಿತ್ತು.

ಈ ಮೆಸೇಜ್ ಗೆ ಐವರು ಆಟಗಾರರ ಪೈಕಿ ರಾಜಗೋಪಾಲ್ ಸತೀಶ್ ಮಾತ್ರ ʼನನ್ನಿಂದ ಈ ಕೆಲಸ ಆಗದುʼ ಅಂತ ರಿಪ್ಲೈ ಮಾಡಿ ಈ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದಿದ್ದರು‌. ನಂತರ ಬಿಸಿಸಿಐನ ಸೌತ್ ಭ್ರಷ್ಟಾಚಾರ ನಿಗ್ರಹದಳ ಜಯನಗರ ಠಾಣೆಗೆ ದೂರು ನೀಡಿತ್ತು. ಈ ದೂರಿನಂತೆ ಟೆಕ್ನಿಕಲ್ ಆ್ಯಂಗಲ್ ನಲ್ಲಿ ತನಿಖೆ ನಡೆಸಿ ಜಯನಗರ ಇನ್‌ ಸ್ಪೆಕ್ಟರ್ ಮಂಜುನಾಥ್, ಆರೋಪಿ ಆನಂದ್ ಕುಮಾರ್ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ‌.

ಈ ಆನಂದ್ ಕುಮಾರ್ ಮೂಲತಃ ಬಾಗೇಪಲ್ಲಿಯವ. ಫಿಕ್ಸಿಂಗ್ ಮಾಡೋಕೆ ಅಂತಾನೇ ಯೂ ಟ್ಯೂಬ್ ಸರ್ಚ್ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಿದ್ಸ. ಈತ ಮ್ಯಾಚ್ ಫಿಕ್ಸಿಂಗ್ ಬದಲು ಆಟಗಾರರಿಗೆ ಮೆಸೇಜ್ ಮಾಡಿ, ಅವ್ರೂ ಒಪ್ಪಿದ್ರೆ ಅವರಿಗೇ ಬ್ಲ್ಯಾಕ್ ಮೇಲ್‌ ಮಾಡಿ ಹಣ ದೋಚುವ ಸಂಚು ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕ್ರಿಮಿನಲ್ ಹಿನ್ನೆಲೆಯಿಲ್ಲದ ಆನಂದ, ಸಾಲ ತೀರಿಸಿಕೊಳ್ಳಲು ಅಡ್ಡದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ.

Edited By :
Kshetra Samachara

Kshetra Samachara

21/01/2022 08:28 pm

Cinque Terre

830

Cinque Terre

0

ಸಂಬಂಧಿತ ಸುದ್ದಿ