ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಸೈಕಲ್ ಕಳ್ಳರ ಗ್ಯಾಂಗ್ ಮತ್ತೆ ಆಕ್ಟೀವ್ ಆಗಿದೆ. ಹೈ ಎಂಡ್ ಸೈಕಲ್ ಗಳನ್ನ ಟಾರ್ಗೆಟ್ ಮಾಡುವ ಈ ಕಳ್ಳರು ಸಾಮಾನ್ಯರಂತೆ ಏರಿಯಾದಲ್ಲಿ ಸುತ್ತಾಡಿ ದುಬಾರಿ ಬೆಲೆಯ ಸೈಕಲ್ ಗಳನ್ನ ಟ್ರೇಸ್ ಮಾಡಿ ನೈಟ್ ಆ ಸೈಕಲ್ ಎಗರಿಸಿ ಎಸ್ಕೇಪ್ ಆಗತ್ತಾರೆ.
ಇಂದು ಬೆಳಗ್ಗೆ ವಸಂತನಗರದ ಒಂದೇ ಏರಿಯಾದಲ್ಲಿ ಎರಡು ದುಬಾರಿ ಬೆಲೆಯ ಸೈಕಲ್ ಕಳ್ಳತನ ಮಾಡಿದ್ದಾರೆ. ಮನೆಗಳ ಕಂಪೌಂಡ್ ಜಂಪ್ ಮಾಡಿ ಒಳಗೆ ಬರುವ ಈ ಕಳ್ಳರು ಸೈಲೆಂಟ್ ಆಗಿ ಸೈಕಲ್ ಕದ್ದು ಎಸ್ಕೇಪ್ ಆಗೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಕಲ್ ಕಳ್ಳರಿಗಾಗಿ ಹುಡುಕಾಟ ಆರಂಭವಾಗಿದೆ.
Kshetra Samachara
19/01/2022 04:46 pm