ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೀಗ ಹಾಕಿದ ಮನೆ ಕನ್ನ ಹಾಕ್ತಿದ್ದ ಆರೋಪಿಗಳು ಅಂದರ್

ಬೆಂಗಳೂರು:ಬೀಗ ಹಾಕಿದ ಮನೆಗನ್ನ ಮನೆಗಳನ್ನೇ ಟಾರ್ಗೇಟ್ ಮಾಡಿಕೊಂಡು ನಗರದೆಲ್ಲೆಡೆ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 10ರಂದು ಆರ್.ಆರ್.ನಗರದ ಕೃಷ್ಣಪ್ಪ ಗಾರ್ಡನ್ ನ ಮನೆಯೊಂದರಲ್ಲಿ ಕಳ್ಳತನ ಮಾಡಿದ ಆರೋಪದಡಿ ಮಂಜುನಾಥ್ ಹಾಗೂ ಹೇಮಂತ್ ಎಂಬುವರನ್ನು ಬಂಧಿಸಿ 9 ಲಕ್ಷ ಬೆಲೆಯ 48 ಗ್ರಾಂ ಚಿನ್ನ, ಆರು ಬೈಕ್ ಹಾಗೂ ಒಂದು ಕಾರು ಜಪ್ತಿ ಮಾಡಿಕೊಂಡಿದ್ದಾರೆ. ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿ ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜು ಜೀವನ ನಡೆಸಲು ಕಳ್ಳತನದ ಹಾದಿ ಹಿಡಿದಿದ್ದ ಆರೋಪಿಗಳು, ರಾತ್ರಿ ವೇಳೆ ಮನೆಗೆ ಬಂದು ಬೀಗ ಹೊಡೆದು ಮನೆಗೆ ನುಗ್ಗಿ ನಗ-ನಾಣ್ಯ ದೋಚಿ‌ ಪರಾರಿಯಾಗುತ್ತಿದ್ದರು.ಕಳೆದ ವರ್ಷ ಆರ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ತನಿಖೆಗೊಂಡ ಇನ್ ಸ್ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ಜೈಲಿಗೆ ಹೋಗಿ ಜಾಮೀನಿನ ಹೊರಗಿದ್ದ ಎಂಓಬಿ ಆಗಿದ್ದ ಮಂಜುನಾಥ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.‌

Edited By : PublicNext Desk
Kshetra Samachara

Kshetra Samachara

12/01/2022 01:00 pm

Cinque Terre

390

Cinque Terre

0

ಸಂಬಂಧಿತ ಸುದ್ದಿ