ಬೆಂಗಳೂರು: ಮಹಿಳೆಗೆ ಹಸ್ತಮೈಥುನದ ಸೆಲ್ಫಿ ವಿಡಿಯೋ ಕಳುಹಿಸಿ ಆಹ್ವಾನಿಸಿದ್ದ ವ್ಯಕ್ತಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಪ್ರಾವಿಷನ್ ಸ್ಟೋರ್ ಮಾಲಕಿ ನೀಡಿದ ದೂರಿನ ಮೇರೆಗೆ ಮಾರುತಿ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಿನಸಿ ಹಾಗೂ ತರಕಾರಿ ಖರೀದಿಸಲು ಆರೋಪಿಯೂ ಆಗಾಗ ಪ್ರಾವಿಷನ್ಸ್ ಸ್ಟೋರ್ ಗೆ ಬರುತ್ತಿದ್ದ. ಗ್ರಾಹಕನಾಗಿದ್ದರಿಂದ ಸಹಜವಾಗಿ ಮಹಿಳೆ ಸಲುಗೆ ಬೆಳೆಸಿಕೊಂಡಿದ್ದರು. ಈಕೆಯ ಮೊಬೈಲ್ ನಂಬರ್ ಪಡೆದ ಆರೋಪಿ ದಿನಸಿ ಖರೀದಿಗಾಗಿ ವಿಚಾರಿಸುತ್ತಿದ್ದ. ಆರಂಭದಲ್ಲಿ ವಾಟ್ಸಾಪ್ಸ್ ನಲ್ಲಿ ಫಾರ್ವಡ್ ಮೇಸೆಜ್, ಫನ್ನಿ ವಿಶ್ಯೂಯಲ್ ಕಳುಹಿಸುತ್ತಿದ್ದ.
ಇದೇ ತಿಂಗಳ 6 ರಂದು ರಾತ್ರಿ ಮಹಿಳೆ ಮೊಬೈಲ್ ಗೆ ಹಸ್ತಮೈಥುನ ಸೆಲ್ಫಿ ವಿಡಿಯೊ ಕಳುಹಿಸಿದ್ದ. 'ಜೊತೆಗೆ ಅಕ್ಕ ಒಂದು ಸಲ ನೀನೆ ಬಾ ಎಂದು ಮೇಸೆಜ್ ಮಾಡಿದ್ದ'. ಇದರಿಂದ ಗಾಬರಿಗೊಂಡ ಮಹಿಳೆ ಮನೆಯವರಿಗೆ ತಿಳಿಸಿ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು.
Kshetra Samachara
10/01/2022 08:44 pm