ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖ್ಯಾತ ಜ್ಯೋತಿಷಿ ಪುತ್ರನಿಂದ ಸಚಿವರ ಪುತ್ರನಿಗೆ ಬ್ಲ್ಯಾಕ್‌ ಮೇಲ್!; ಅಶ್ಲೀಲ ವೀಡಿಯೊ ಬಹಿರಂಗ ಪಡಿಸೋ ಬೆದರಿಕೆ

ಬೆಂಗಳೂರು: ಸಚಿವ ಎಸ್. ಟಿ. ಸೋಮಶೇಖರ್ ಪುತ್ರ ನಿಶಾಂತ್ ಗೆ ಬೆದರಿಕೆ ಮೆಸೇಜ್ ಮಾಡಿ, ಅಶ್ಲೀಲ ವೀಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿ ಎಫ್‌ ಐ ಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಖ್ಯಾತ‌‌ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಪುತ್ರ ರಾಹುಲ್‌ ಭಟ್ ನನ್ನು ಬಂಧಿಸಿದ್ದಾರೆ.‌

ರಾಹುಲ್ ಭಟ್, ನಿಶಾಂತ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಈತನಿಂದಲೇ ಬೆದರಿಕೆ ಕರೆ ಬಂದಿರೋದು ಕನ್ಫರ್ಮ್ ಆಗಿದೆ. ಯುಕೆ ಸಿಮ್‌ಕಾರ್ಡ್ ಬಳಸಿ ಬೆದರಿಕೆ‌ ಹಾಕಿದ್ದು, ಸಿಮ್ ಕಾರ್ಡ್ ಜಪ್ತಿ ಮಾಡಲಾಗಿದೆ. ಕೃತ್ಯದ ಹಿಂದೆ‌ ಶಾಸಕರೋರ್ವರ ಪುತ್ರಿಯ ಕೈವಾಡವಿರುವ ಅನುಮಾನ‌ ವ್ಯಕ್ತವಾಗಿದೆ. ಸದ್ಯ ರಾಹುಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರೋ ಪೊಲೀಸ್ರು, ಕೆಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ಇನ್ನು ದೂರಿನಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನ‌ ನೋಡೋದಾದ್ರೆ ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಅಶ್ಲೀಲ ನಕಲಿ ದೃಶ್ಯಾವಳಿ ಸೃಷ್ಟಿ ಮಾಡಲಾಗಿದೆ. ಕೆಲ ಫೋಟೊಗಳನ್ನೂ ಸಹ ಸೃಷ್ಟಿಸಿ 25/12/2021 ರಂದು ಕಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ವೀಡಿಯೊ ಮತ್ತು ಫೋಟೋಸ್ ನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ ಹಾಗೂ ಭಾನುಪ್ರಕಾಶ್ ಗೆ ಕಳಿಸಿದ್ದಾರೆ. ಅಲ್ಲದೆ,

ವಾಟ್ಸ್‌ ಆಪ್ ಮೂಲಕ ಪದೇ ಪದೆ ಮೆಸೇಜ್ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿ, ತಾವು ಕೇಳಿದಷ್ಟು ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ರು. ಹಣ ನೀಡದಿದ್ದಲ್ಲಿ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಿಶಾಂತ್ ಉಲ್ಲೇಖಿಸಿದ್ದಾರೆ.

Edited By : Shivu K
PublicNext

PublicNext

09/01/2022 03:05 pm

Cinque Terre

48.9 K

Cinque Terre

2

ಸಂಬಂಧಿತ ಸುದ್ದಿ